ಬೆಂಗಳೂರು: ರಾಜತಾಂತ್ರಿಕ ನಿಯಮ ಉಲ್ಲಂಘಿಸಿ ಟ್ರಂಪ್ ಭೇಟಿಯಾಗಲು ಸಂಸದ ತೇಜಸ್ವಿಸೂರ್ಯ ಯತ್ನಿಸಿದ್ದಾರೆಂದು ಆರೋಪಿಸಿರುವ ಕಾಂಗ್ರೆಸ್ ಲೇವಡಿ ಮಾಡಿದೆ.
ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಅಮೆರಿಕದಿಂದ ಛೀಮಾರಿ ಹಾಕಿಸಿಕೊಂಡಿದ್ದಾರೆ. ವೈಟ್ ಹೌಸ್ ನಲ್ಲಿ ದೇಶದ ಮಾನವನ್ನು ಹರಾಜು ಮಾಡಿದ್ದಾರೆ. ಸಂಸದ ತೇಜಸ್ವಿಸೂರ್ಯ ಕಾಣೆಯಾಗಿದ್ದಾರೆ ಎಂದು ಕಾಂಗ್ರೆಸ್ ವಿಭಿನ್ನ ಪೋಸ್ಟರ್ ಅಭಿಯಾನ ನಡೆಸಿದೆ.
ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ದೇಶದ ಮಾನ ಹರಾಜು ಮಾಡಿದ್ದಾರೆ. ಅವರನ್ನು ಕೂಡಲೇ ತನಿಖೆಗೆ ಒಳಪಡಿಸಬೇಕು. ಸಂಸತ್ ಸದಸ್ಯತ್ವ ಸ್ಥಾನದಿಂದ ಅನರ್ಹಗೊಳಿಸಬೇಕೆಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್.ಮನೋಹರ್ ಆಗ್ರಹಿಸಿದ್ದಾರೆ.
ಈ ವೇಳೆ ನಾನೊಬ್ಬ ತರ್ಲೆ, ಅರೆಹುಚ್ಚ ಎಂಬ ಪೋಸ್ಟರ್ ಗಳನ್ನು ಬೆಂಗಳೂರಿನ ಮೇಟ್ರೋ ಪಿಲ್ಲರ್‌ಗಳ ಮೇಲೆ ಅಂಟಿಸಿ ಕಾಂಗ್ರೆಸ್ ಅಭಿಯಾನ ನಡೆಸಿದೆ.



















