ನವದೆಹಲಿ: ಇಸ್ರೋ (ISRO news) ಇತ್ತೀಚೆಗೆ ಹಾರಿಸಿದ 100ನೇ ರಾಕೆಟ್ (Rocket) ಉಡಾವಣೆಯ ಕಾರ್ಯಾಚರಣೆಗೆ ತಾಂತ್ರಿಕ ದೋಷ (Technical glitch) ಎದುರಾಗಿದ್ದು, ಉಪಗ್ರಹ (Satellite) ಕಕ್ಷೆಗೆ ಸೇರಿಸುವ ಕಾರ್ಯ ವಿಳಂಬವಾಗಿದೆ.
ಕಳೆದ ಬುಧವಾರ ಉಡಾವಣೆಯಾದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) 100ನೇ ರಾಕೆಟ್ NVS-02 ನ್ಯಾವಿಗೇಷನ್ ಉಪಗ್ರಹ ಹೊಂದಿದೆ. ಈ ರಾಕೆಟ್‌ನಲ್ಲಿ ತಾಂತ್ರಿಕ ದೋಷ ಕಂಡುಬಂದಿದ್ದು, ಕಾರ್ಯಾಚರಣೆಗೆ ಅಡಚಣೆಯಾಗಿದೆ ಎಂದು ಇಸ್ರೋ ಮೂಲಗಳು ತಿಳಿಸಿವೆ.
ಉಪ್ರಗ್ರಹ ಉಡಾವಣೆಯ ಬಳಿಕ ಶಕ್ತಿಗಾಗಿ ಸೌರಫಲಕಗಳನ್ನು ನಿಯೋಜಿಸಲಾಗಿತ್ತು. ಆದರೆ ಕಕ್ಷೆಗೆ ಏರಿಸಲು ಥ್ರಸ್ಟರ್‌ಗಳನ್ನು ಹಾರಿಸುವ ಕವಾಟಗಳು ತೆರೆದುಕೊಳ್ಳದ ಕಾರಣ ಕಕ್ಷೆಯ ಸುತ್ತುಗಳನ್ನು ವೃದ್ಧಿಸುವ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ. ಮತ್ತೆ ಪ್ರಯತ್ನಗಳನ್ನು ಮಾಡಿ ನಿರ್ದಿಷ್ಟ ಕಕ್ಷೆಗೆ ಸೇರಿಸಬಹುದು. ತಾಂತ್ರಿಕ ದೋಷ ಮುಂದುವರಿದರೆ ಕಾರ್ಯಾಚರಣೆ ಕೈಬಿಡುವ ಸಾಧ್ಯತೆಗಳಿವೆ.
ಇಸ್ರೋ ಈ ಬಗ್ಗೆ ತನ್ನ ವೆಬ್‌ಸೈಟ್ ನಲ್ಲಿ ಮಾಹಿತಿ ನೀಡಿದೆ. ಆಕ್ಸಿಡೈಸರ್ ಅನ್ನು ಪ್ರವೇಶಿಸುವ ಕವಾಟಗಳು ತೆರೆಯದ ಕಾರಣ ಉಪಗ್ರಹವನ್ನು ಗೊತ್ತುಪಡಿಸಿದ ಕಕ್ಷೆಯ ಹೆಚ್ಚಿಸುವ ಕಾರ್ಯಾಚರಣೆಗಳನ್ನು ಕೈಗೊಳ್ಳಲು ಸಾಧ್ಯವಾಗಲಿಲ್ಲ” ಎಂದು ಹೇಳಿದೆ.
ಭೂಮಿಯ ಸುತ್ತಲಿನ ಹತ್ತಿರದ ಬಿಂದುವಿಗೆ ಸುಮಾರು 170 ಕಿಲೋಮೀಟರ್‌ಗಳ ದೀರ್ಘವೃತ್ತದ ಕಕ್ಷೆಯಿಂದ ಮತ್ತು ಭೂಮಿಯಿಂದ ಅತ್ಯಂತ ದೂರದ ಬಿಂದುವಿನಲ್ಲಿ ಸುಮಾರು 36,577 ಕಿಲೋಮೀಟರ್‌ಗಳವರೆಗೆ ಉಪಗ್ರಹವು ತನ್ನ ಗೊತ್ತುಪಡಿಸಿದ ಕಾರ್ಯಗಳನ್ನು ನಿರ್ವಹಿಸಲು ಸಾಧ್ಯವಾಗುವುದಿಲ್ಲ ಎಂದು ಬಾಹ್ಯಾಕಾಶ ತಜ್ಞರು ಹೇಳಿದ್ದಾರೆ.