ಬೆಂಗಳೂರು: ಕುಟುಂಬ ಕಲಹದಿಂದ (Family Dispute) ಮಾನಸಿಕವಾಗಿ ನೊಂದು ಟೆಕ್ಕಿಯೊಬ್ಬರು (Techie) ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದಲ್ಲಿ (Bengaluru) ನಡೆದಿದೆ.
ಖಾಸಗಿ ಕಂಪನಿಯ ಹಿರಿಯ ಉದ್ಯೋಗಿ ಪ್ರಶಾಂತ್ ನಾಯರ್ (40) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಎನ್ನಲಾಗಿದೆ. ಚಿಕ್ಕಬಾಣಾವರದ (Chikkabanavara) ಡಿ.ಎಕ್ಸ್ ಸ್ಮಾರ್ಟ್ ನೆಸ್ಟ್ ಅಪಾರ್ಟ್ಮೆಂಟ್ ನಲ್ಲಿ ಟೆಕ್ಕಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
12 ವರ್ಷದ ಹಿಂದೆ ಪೂಜಾ ಎಂಬ ಯುವತಿಯನ್ನು ಪ್ರಶಾಂತ್ ಮದುವೆಯಾಗಿದ್ದರು. ಪ್ರಶಾಂತ್ ದಂಪತಿಗೆ 8 ವರ್ಷದ ಮಗಳು ಸಹ ಇದ್ದಾಳೆ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಪೂಜಾ ನಾಯರ್ ದಂಪತಿ ಮಧ್ಯೆ ಸಾಕಷ್ಟು ಭಿನ್ನಾಭಿಪ್ರಾಯಗಳಿದ್ದವು. ನಂತರ ಡಿವೋರ್ಸ್ ಕೂಡ ಆಗಿದೆ ಎಂಬ ಮಾಹಿತಿ ಲಭಿಸಿದೆ. ಇದರಿಂದ ಮಾನಸಿಕವಾಗಿ ನೊಂದಿದ್ದ ಕಾರಣ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಸಂಶಯ ವ್ಯಕ್ತವಾಗಿದೆ. ಈ ಕುರಿತು ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.