ಬೆಂಗಳೂರು : ಕನ್ನಡ ಚಿತ್ರರಂಗದಲ್ಲಿ ಸಾಲು ಸಾಲು ಹೊಸ ಸಿನೆಮಾಗಳು ಸೆಟ್ಟೇರುತ್ತಿವೆ. ಆ ಸಾಲಿಗೆ ಆಕ್ಶನ್ ಪ್ರಿನ್ಸ್ ದ್ರುವಾ ಸರ್ಜಾ ಅವರ ಕೆಡಿ ಸಿನೆಮಾ ಕೂಡ ಒಂದು. ಈಗ ಈ ಬಹು ನಿರೀಕ್ಷಿತ ಕೆಡಿ ಚಿತ್ರದ ಟೀಸರ್ ಲಾಂಚ್ ಗೆ ಕ್ಷಣಗಣನೆ ಆರಂಭವಾಗಿದೆ.
ಹೀಗಾಗಿ ಟೀಸರ್ ಲಾಂಚ್ ಗಾಗಿ ನಟ ಧ್ರುವ ಸರ್ಜಾ ಮುಂಬೈಗೆ ಹೊರಟಿದ್ದು, ನಾಳೆ ಮುಂಬೈನಲ್ಲಿ ಟೀಸರ್ ಲಾಂಚ್ ಆಗಲಿದೆ. ಮುಂಬೈ, ಹೈದರಾಬಾದ್, ಚೆನ್ನೈ, ಬಳಿಕ ಬೆಂಗಳೂರಿನಲ್ಲಿ ಕೆಡಿ ಚಿತ್ರದ ಟೀಸರ್ ಲಾಂಚ್ ಆಗಲಿದೆ ಎಂದು ಚಿತ್ರ ತಂಡ ಹೇಳಿದೆ.
ಸಿನೆಮಾದ ನಿರ್ದೇಶಕ ಪ್ರೇಮ್ ಕೂಡ ತಂಡದೊಂದಿಗೆ ಮುಂಬೈಗೆ ತೆರಳಿದ್ದು ಟೀಸರ್ ಲಾಂಚ್ ಗೆ ಕ್ಷಣಗಣಣೆ ಆರಂಭವಾಗಿದೆ.