ನ್ಯೂಜಿಲೆಂಡ್ ನ ಸ್ಟಾರ್ ಬೌಲರ್ ಟೀಮ್ ಸೌಥಿ ಕ್ರಿಕೆಟ್ ಅಂಗಳಕ್ಕೆ ಗುಡ್ ಬೈ ಹೇಳಿದ್ದು, ದಾಖಲೆಯೊಂದಿಗೆ ವಿದಾಯ ಹೇಳಿದ್ದಾರೆ.
ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ಮಧ್ಯೆ ನಡೆಯುತ್ತಿರುವ ಟೆಸ್ಟ್ ಟೂರ್ನಿಯ ಕೊನೆಯ ಪಂದ್ಯ ಆರಂಭವಾಗಿದೆ. ಈಗಾಗಲೇ ಟೂರ್ನಿಯನ್ನು ಇಂಗ್ಲೆಂಡ್ ತಂಡ ಕೈ ವಶ ಮಾಡಿಕೊಂಡಿದೆ. ಸರಣಿ ಸೋತಿರುವ ನ್ಯೂಜಿಲೆಂಡ್ ಕೊನೆಯ ಟೆಸ್ಟ್ ಗೆದ್ದು ತಂಡದ ಸ್ಟಾರ್ ವೇಗಿಗೆ ಗೆಲುವಿನ ವಿದಾಯ ಹೇಳಲು ಮುಂದಾಗಿದೆ.
ನ್ಯೂಜಿಲೆಂಡ್ ತಂಡದ ಸ್ಟಾರ್ ವೇಗದ ಬೌಲರ್ ಟಿಮ್ ಸೌಥಿ ಈ ಟೆಸ್ಟ್ ಸರಣಿ ಆರಂಭಕ್ಕೂ ಮುನ್ನವೇ ಇದು ನನ್ನ ಕೊನೆಯ ಟೆಸ್ಟ್ ಸರಣಿ ಎಂದು ಹೇಳಿದ್ದರು. ಹೀಗಾಗಿ ಇದು ಅವರ ವೃತ್ತಿ ಜೀವನದ ಕೊನೆಯ ಅಂತಾರಾಷ್ಟ್ರೀಯ ಪಂದ್ಯವಾಗಿದೆ. ಹೀಗಾಗಿ ಸೌಥಿಗೆ ಈ ಪಂದ್ಯದ ಬಹಳ ವಿಶೇಷವಾಗಿದೆ.
ಸೌಥಿ ತಮ್ಮ ಕೊನೆಯ ಪಂದ್ಯದಲ್ಲಿ ವಿಂಡೀಸ್ನ ಮಾಜಿ ಸ್ಫೋಟಕ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಅವರ ದೊಡ್ಡ ದಾಖಲೆ ಸರಿಗಟ್ಟಿದ್ದಾರೆ. ಅಲ್ಲದೇ, ದಕ್ಷಿಣ ಆಫ್ರಿಕಾದ ಲೆಜೆಂಡರಿ ಆಲ್ರೌಂಡರ್ ಜಾಕ್ವೆಸ್ ಕಾಲಿಸ್ ಅವರ ದಾಖಲೆ ಮುರಿದಿದ್ದಾರೆ.
ಇನ್ನಿಂಗ್ಸ್‌ನಲ್ಲಿ 10 ಎಸೆತಗಳನ್ನು ಎದುರಿಸಿದ ಸೌಥಿ 230 ಸ್ಟ್ರೈಕ್ ರೇಟ್ ನಲ್ಲಿ 23 ರನ್ ಗಳಿಸಿದ್ದಾರೆ. ಈ ವೇಳೆ 1 ಬೌಂಡರಿ ಮತ್ತು 3 ಸಿಕ್ಸರ್ ಸಿಡಿಸಿದ್ದಾರೆ. ಈ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಗಳನ್ನು ಬಾರಿಸಿದ ಆಟಗಾರರ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾದ ದಂತಕಥೆ ಜಾಕ್ವೆಸ್ ಕಾಲಿಸ್ ಅವರನ್ನು ಹಿಂದಿಕ್ಕಿದ್ದಾರೆ. ಅಲ್ಲದೇ, ಗೇಲ್ ದಾಖಲೆ ಸರಿಗಟ್ಟಿದ್ದಾರೆ.
ಟಿಮ್ ಸೌಥಿ ತಮ್ಮ ಟೆಸ್ಟ್ ವೃತ್ತಿ ಜೀವನದಲ್ಲಿ ಇಲ್ಲಿಯವರೆಗೆ 98 ಸಿಕ್ಸರ್ ಗಳನ್ನು ಬಾರಿಸಿದ್ದು, ಈ ಮೂಲಕ ಟೆಸ್ಟ್‌ನಲ್ಲಿ 97 ಸಿಕ್ಸರ್‌ಗಳನ್ನು ಸಿಡಿಸಿದ್ದ ಕಾಲಿಸ್ ಅವರನ್ನು ಹಿಂದಿಕ್ಕಿದ್ದಾರೆ. 98 ಸಿಕ್ಸರ್ ಸಿಡಿಸಿರುವ ಗೇಲ್ ದಾಖಲೆ ಸರಿಗಟ್ಟಿದ್ದಾರೆ.
ಒಂದು ವೇಳೆ ಅವರು ಇನ್ನೊಂದು ಸಿಕ್ಸರ್ ಸಿಡಿಸಿದರೆ, ಸಿಕ್ಸರ್ಗಳ ಶತಕ ಸಿಡಿಸಿದ ನಾಲ್ಕನೇ ಬ್ಯಾಟ್ಸ್‌ಮನ್ ಎನಿಸಿಕೊಳ್ಳಲಿದ್ದಾರೆ. ಇಲ್ಲಿಯವರೆಗೆ ಕೇವಲ ಮೂವರು ಆಟಗಾರರು ಮಾತ್ರ ಶತಕದ ಸಿಕ್ಸರ್ ಸಿಡಿಸಿದ್ದಾರೆ. 133 ಸಿಕ್ಸರ್ಗಳನ್ನು ಬಾರಿಸಿರುವ ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್ ಮೊದಲ ಸ್ಥಾನದಲ್ಲಿದ್ದಾರೆ. ವೀರೇಂದ್ರ ಸೆಹ್ವಾಗ್ ಭಾರತದ ಪರ ಗರಿಷ್ಠ ಸಂಖ್ಯೆಯ ಸಿಕ್ಸರ್‌ಗಳನ್ನು ಹೊಡೆದಿದ್ದು, ಅವರ ಹೆಸರಿನಲ್ಲಿ 91 ಸಿಕ್ಸರ್ ಸಿಡಿಸಿದ್ದಾರೆ.