ಬೆಂಗಳೂರು: ಹೋಂವರ್ಕ್ ಮಾಡಿಲ್ಲವೆಂದು ಶಾಲಾ ಶಿಕ್ಷಕಿಯೊಬ್ಬರು ಬಾಲಕನಿಗೆ ಬಾಸುಂಡೆ ಬರುವ ಹಾಗೆ ಹಲ್ಲೆ ನಡೆಸಿರುವ ಘಟನೆ ನಗರದ ನಂದಿನಿ ಲೇಔಟ್‌ನಲ್ಲಿರುವ ವೀಣಾ ವಿದ್ಯಾಸಂಸ್ಥೆಯಲ್ಲಿ ನಡೆದಿದೆ.
ವೀಣಾ ಸ್ಕೂಲ್ ಶಿಕ್ಷಕಿ ಆಂಗ್ಲಿನ್ ಎಂಬುವರಿಂದ ಅದೇ ಶಾಲೆಯ 4ನೇ ತರಗತಿ ಬಾಲಕನಿಗೆ ಇದೇ ತಿಂಗಳು 10ರಂದು ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದೆ.
ಶಾಲಾ ಶಿಕ್ಷಕಿ ಆಂಗ್ಲಿನ್ ಬಾಲಕನಿಗೆ ಹಿಗ್ಗಾಮುಗ್ಗಾ ಹಲ್ಲೆ ಮಾಡಿ ಬಳಿಕ ಈ ವಿಚಾರವನ್ನು ಯಾರಿಗಾದರೂ ತಿಳಿಸಿದರೆ ಮತ್ತೆ ಹೊಡೆಯುವುದಾಗಿ ಬೆದರಿಕೆ ಹಾಕಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ ತನ್ನ ಅಮ್ಮನಿಗೆ ವಿಷಯ ಹೇಳದೆ ಮುಚ್ಚಿಟ್ಟಿದ್ದ ಬಾಲಕ, ಮೊನ್ನೆ ತಾಯಿ ಲಕ್ಷ್ಮಿ ವಿಚಾರ ತಿಳಿದು ಬಾಲಕನಿಗೆ ಕೇಳಿದ್ದಾರೆ. ಈ ವೇಳೆ ನಡೆದ ವಿಚಾರವನ್ನು ತನ್ನ ತಾಯಿಗೆ ಬಾಲಕ ತಿಳಿಸಿದ್ದಾನೆ.
ಈ ಘಟನಾ ಸಂಬಂಧ ನಂದಿನಿ ಲೇಔಟ್ ಪೊಲೀಸ್ ಠಾಣೆಗೆ ತಾಯಿ ದೂರು ನೀಡಿದ್ದು, ಬಿಎನ್‌ಎಸ್ ಸೆಕ್ಷನ್ 115, 351 ಜ್ಯುವೆನಲ್ ಜಸ್ಟೀಸ್ ಆಕ್ಟ್ ಅಡಿ ಆಂಗ್ಲಿನಾ ಹಾಗೂ ವೀಣಾ ಶಾಲೆ ವಿರುದ್ಧ ಎಫ್ ಐ ಆರ್ ದಾಖಲಿಸಲಾಗಿದೆ. ಈ ಹಿನ್ನೆಲೆ ನಂದಿನಿ ಲೇಔಟ್ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ: 3 ಮದುವೆಯಾಗಿ ಲಕ್ಷಾಂತರ ರೂ. ಲೂಟಿ ಮಾಡಿದ ಖತರ್ನಾಕ್ ಮಹಿಳೆ | ಠಾಣೆ ಮೆಟ್ಟಿಲೇರಿದ ಗಂಡಂದಿರು



















