ಕೇವಲ ಕೆಲವು ಸಮಯದ ಹಿಂದೆ, ಟಾಟಾ ಮೋಟಾರ್ಸ್ನ ಪಂಚ್ (Tata Punch), ಮಾರುತಿ ಸುಜುಕಿಯ ಆಧಿಪತ್ಯ ಕೊನೆಗೊಳಿಸಿರುವ ಸುದ್ದಿ ಬಂದಿತ್ತು. ಈ ಮಿನಿ ಎಸ್ಯುವಿ 2024ರಲ್ಲಿ ಅತ್ಯಂತ ಹೆಚ್ಚು ಮಾರಾಟವಾದ ಕಾರಿನ ಪಟ್ಟಿಯಲ್ಲಿ ವ್ಯಾಗನ್ ಆರ್ ಮೀರಿಸಿ ಮೊದಲ ಸ್ಥಾನ ಪಡೆಯಿತು. ಈಗ, ಟಾಟಾ ಕಂಪನಿಯು ಇನ್ನೊಂದು ಪ್ರಮುಖ ಮೈಲುಗಲ್ಲು ತಲುಪಿರುವುದಾಗಿ ಪ್ರಕಟಿಸಿದೆ. ಟಾಟಾ ಮೋಟಾರ್ಸ್ ಪ್ರಕಾರ, 2021ರ ಅಕ್ಟೋಬರ್ ನಲ್ಲಿ ಮೊದಲ ಬಾರಿ ರಸ್ತೆಗೆ ಇಳಿದ ಪಂಚ್ ಇಲ್ಲಿಯವರೆಗೆ ಒಟ್ಟು 5,00,000 ಮಾರಾಟಗೊಂಡು ದಾಖಲೆ ನಿರ್ಮಿಸಿದೆ.
ಟಾಟಾ ಪಂಚ್ ಮಾರಾಟದ ಅಂಕಿ ಅಂಶಗಳು

ಟಾಟಾ ಪಂಚ್ ಕಂಪನಿಯ ಅತ್ಯಂತ ಚಿಕ್ಕ ಎಸ್ಯುವಿ ಮಾದರಿಯಾಗಿದ್ದು, ಇದು ಮೈಕ್ರೋ-ಎಸ್ಯುವಿ ವಿಭಾಗದಲ್ಲಿ ಜನಪ್ರಿಯವಾಗಿದೆ. ಇದು ತನ್ನ ಮೊದಲ 1 ಲಕ್ಷ ಮಾರಾಟದ ಮೈಲಿಗಲ್ಲನ್ನು ಆಗಸ್ಟ್ 2022ರಲ್ಲಿ ತಲುಪಿತ್ತು. 2023ರ ಮೇನಲ್ಲಿ 2 ಲಕ್ಷ ಮಾರಾಟವಾಗಿತ್ತು. ಡಿಸೆಂಬರ್ 2023 ಮತ್ತು ಜುಲೈ 2024ರಲ್ಲಿ ಕ್ರಮವಾಗಿ 3 ಲಕ್ಷ ಮತ್ತು 4 ಲಕ್ಷ ಮಾರಾಟದ ಗುರಿಯನ್ನು ದಾಟಿತ್ತು. ಜನವರಿಯಲ್ಲಿ ಅದು 5 ಲಕ್ಷ ಮಾರಾಟದ ಸಾಧನೆ ಮಾಡಿದೆ.

6 ತಿಂಗಳ ಟಾಟಾ ಪಂಚ್ ಮಾರಾಟದ ಅಂಕಿ ಅಂಶಗಳು
ಜುಲೈ 2024: 16,121 ಕಾರುಗಳು
ಆಗಸ್ಟ್ 2024: 15,643 ಕಾರುಗಳು
ಸೆಪ್ಟೆಂಬರ್ 2024: 13,711 ಕಾರುಗಳು
ಅಕ್ಟೋಬರ್ 2024: 15,740 ಕಾರುಗಳು
ನವೆಂಬರ್ 2024: 15,435 ಕಾರುಗಳು
ಡಿಸೆಂಬರ್ 2024: 15,073 ಕಾರುಗಳು

ಟಾಟಾ ಪಂಚ್ ಯಾಕೆ ಜನಪ್ರಿಯ?
- ಹಲವು ಡ್ರೈವ್ಟ್ರೈನ್ ಆಯ್ಕೆಗಳು
ಟಾಟಾ ಪಂಚ್ ವಿವಿಧ ಶಕ್ತಿಯಾಂತ್ರಿಕೆ ಆಯ್ಕೆಗಳೊಂದಿಗೆ ಲಭ್ಯವಿದೆ. ಇದರಲ್ಲಿ1.2-ಲೀಟರ್ ನ್ಯಾಚುರಲಿ ಅಸ್ಪಿರೇಟೆಡ್ ಪೆಟ್ರೋಲ್ ಎಂಜಿನ್, 88 PS ಶಕ್ತಿ ಮತ್ತು 115 Nm ಟಾರ್ಕ್ ಉತ್ಪಾದಿಸುತ್ತದೆ. ಇದು 5 ಸ್ಪೀಡ್ ಮ್ಯಾನುವಲ್ ಮತ್ತು ಸ್ವಯಂಚಾಲಿತ (AMT) ಗೇರ್ಬಾಕ್ಸ್ನೊಂದಿಗೆ ಲಭ್ಯವಿದೆ.
ಎರಡು ಸಿಲಿಂಡರ್ ತಂತ್ರಜ್ಞಾನವನ್ನು ಹೊಂದಿರುವ ಸಿಎನ್ಜಿ ಈ ಕಾರಿನಲ್ಲಿ ಲಭ್ಯವಿದೆ. ಎಲೆಕ್ಟ್ರಿಕ್ ವೇರಿಯಂಟ್ (Punch EV): ಇದು 25 kWh ಮತ್ತು 35 kWh ಬ್ಯಾಟರಿ ಆಯ್ಕೆಗಳೊಂದಿಗೆ ಬರುತ್ತದೆ. ಪೂರ್ಣ ಚಾರ್ಜ್ನಲ್ಲಿ ಗರಿಷ್ಠ 365 ಕಿ.ಮೀ ರೇಂಜ್ ನೀಡುತ್ತದೆ. ವಿಭಿನ್ನ ಬಜೆಟ್ ಮತ್ತು ಆವಶ್ಯಕತೆಗಳಿಗೆ ತಕ್ಕಂತೆ ಒಂದು ಟಾಟಾ ಪಂಚ್ ಲಭ್ಯವಿರುವುದರಿಂದ, ಈ ಕಾರು ಬಹಳಷ್ಟು ಗ್ರಾಹಕರನ್ನು ಆಕರ್ಷಿಸಿದೆ.
2 ಸುಧಾರಿತ ಫೀಚರ್ಗಳು
ಟಾಟಾ ಪಂಚ್ ಅನ್ನು ಆಕರ್ಷಕವಾದ ಫೀಚರ್ಗಳೊಂದಿಗೆ ತಯಾರು ಮಾಡಲಾಗಿದೆ. 10.25 ಇಂಚಿನ ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ ವೈರ್ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ, ಸೆಮಿ-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಸ್ವಯಂಚಾಲಿತ ಹವಾಮಾನ ನಿಯಂತ್ರಣ (Automatic Climate Control), ಇಲೆಕ್ಟ್ರಿಕ್ ಸನ್ರೂಫ್ (EV ವೇರಿಯಂಟ್), ತಂಪಾಗುವ ಗ್ಲೋವ್ಬಾಕ್ಸ್ ಗ್ರಾಹಕರನ್ನು ಹೆಚ್ಚು ಆಕರ್ಷಿಸುತ್ತವೆ.- 5 ಸ್ಟಾರ್ ಸುರಕ್ಷತಾ ರೇಟಿಂಗ್
ಭಾರತದಲ್ಲಿ ವಾಹನ ಸುರಕ್ಷತೆಯ ಮಹತ್ವ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಟಾಟಾ ಪಂಚ್ 5-ಸ್ಟಾರ್ ಗ್ಲೋಬಲ್ NCAP ಸುರಕ್ಷತಾ ರೇಟಿಂಗ್ ಪಡೆದಿರುವ ಮತ್ತು ಭಾರತದಲ್ಲಿ ಕಡಿಮೆ ಬೆಲೆಗೆ ದೊರೆಯುವ ಕಾರಾಗಿದೆ.
ವಯಸ್ಕರ (Adult) ಸುರಕ್ಷತೆ: 31.46/32 ಇದ್ದರೆ, ಮಕ್ಕಳ ಸುರಕ್ಷತೆ (Child Safety): 45/49 ರಷ್ಟಿದೆ. - ಆಕರ್ಷಕ ಬೆಲೆ
ಭಾರತೀಯ ಮಾರುಕಟ್ಟೆಯು ಬೆಲೆ ಸಂವೇದಿಯಾಗಿರುವ (Price-sensitive) ಕಾರಣ, ಟಾಟಾ ಪಂಚ್ ಅದನ್ನು ಕನಿಷ್ಠ ದರದಲ್ಲಿ ನೀಡಲಾಗಿದೆ. ಈ ಮೂಲಕ ಹೆಚ್ಚು ಜನಪ್ರಿಯವಾಗಿದೆ.
ಪೆಟ್ರೋಲ್ ಮಾದರಿ: ₹6.12 ಲಕ್ಷ (ಪ್ರಾರಂಭಿಕ ದರ) ವಾದರೆ, Punch EV (ಟಾಪ್-ಮಾಡೆಲ್): ₹15.49 ಲಕ್ಷ ರೂಪಾಯಿ. ವಿವಿಧ ಬಜೆಟ್ ಹೊಂದಿರುವ ಗ್ರಾಹಕರಿಗೆ ಅನುಗುಣವಾಗಿ ಪಂಚ್ ಲಭ್ಯವಿದೆ.
ಕೊನೇ ಮಾತು
ಟಾಟಾ ಪಂಚ್ ತಂತ್ರಜ್ಞಾನ, ಸುರಕ್ಷತೆ, ಡ್ರೈವ್ಟ್ರೈನ್ ಆಯ್ಕೆ, ಆಕರ್ಷಕ ಬೆಲೆ, ಮತ್ತು ಎಸ್ಯುವಿ ಡಿಸೈನ್ನಿಂದಾಗಿ ಭಾರೀ ಜನಪ್ರಿಯತೆ ಪಡೆದಿದೆ. ಇದರ 5 ಲಕ್ಷ ಮಾರಾಟದ ಮೈಲಿಗಲ್ಲು ಭಾರತದಲ್ಲಿ ಪ್ರೀಮಿಯಂ ಎಸ್ಯುವಿ ವರ್ಗದಲ್ಲಿಯೂ ಛಾಪು ಮೂಡಿಸಲು ನೆರವಾಗಿದೆ.