ಬೆಂಗಳೂರು : ಭಾರತೀಯ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಯ ದಿಗ್ಗಜ ಟಾಟಾ ಮೋಟಾರ್ಸ್ (Tata Motors), 2026ರ ಏಪ್ರಿಲ್ ತಿಂಗಳಲ್ಲಿ ತನ್ನ ಎಲೆಕ್ಟ್ರಿಕ್ ಕಾರುಗಳ ಖರೀದಿದಾರರಿಗೆ ಭರ್ಜರಿ ಸಿಹಿಸುದ್ದಿ ನೀಡಿದೆ. ಟಿಗೋರ್ ಇವಿ ಹೊರತುಪಡಿಸಿ ತನ್ನ ಬಹುತೇಕ ಎಲ್ಲಾ ಎಲೆಕ್ಟ್ರಿಕ್ ವಾಹನಗಳ ಮೇಲೆ ಆಕರ್ಷಕ ರಿಯಾಯಿತಿ ಮತ್ತು ಪ್ರಯೋಜನಗಳನ್ನು (Discounts and Benefits) ಘೋಷಿಸಿದೆ. ಅದರಲ್ಲೂ ವಿಶೇಷವಾಗಿ, ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ಬಹುನಿರೀಕ್ಷಿತ ಟಾಟಾ ಕರ್ವ್ ಇವಿ (Tata Curvv EV) ಎಲೆಕ್ಟ್ರಿಕ್ ಕೂಪೆ-ಎಸ್ಯುವಿ ಮೇಲೆ ಅತಿ ಹೆಚ್ಚು ಅಂದರೆ 3.45 ಲಕ್ಷ ರೂ. ವರೆಗೆ ಡಿಸ್ಕೌಂಟ್ ಲಭ್ಯವಿದೆ.
Tata Curvv EV ಮೇಲೆ ಅತಿ ದೊಡ್ಡ ಆಫರ್
ಏಪ್ರಿಲ್ ತಿಂಗಳ ರಿಯಾಯಿತಿ ಪಟ್ಟಿಯಲ್ಲಿ ‘ಟಾಟಾ ಕರ್ವ್ ಇವಿ’ ಅತ್ಯಂತ ದೊಡ್ಡ ಫಲಾನುಭವಿಯಾಗಿದೆ. ಟಾಟಾ ಮೋಟಾರ್ಸ್ ತನ್ನ ಈ ಪ್ರೀಮಿಯಂ ಕೂಪೆ-ಎಸ್ಯುವಿ ಮೇಲೆ ಗ್ರಾಹಕರಿಗೆ ಬರೋಬ್ಬರಿ 3.45 ಲಕ್ಷ ರೂ. ವರೆಗಿನ ಗರಿಷ್ಠ ಪ್ರಯೋಜನಗಳನ್ನು ನೀಡುತ್ತಿದೆ. ಯಾವೆಲ್ಲಾ ಆಫರ್? ಇದರಲ್ಲಿ 3 ಲಕ್ಷ ರೂ.ಗಳ ಬೃಹತ್ ‘ಗ್ರೀನ್ ಬೋನಸ್’ ಮತ್ತು ಹಳೆಯ ಕಾರುಗಳನ್ನು ಎಕ್ಸ್ಚೇಂಜ್ ಮಾಡುವವರಿಗೆ 30,000 ರೂ.ಗಳ ಎಕ್ಸ್ಚೇಂಜ್ ಬೋನಸ್ ಸೇರಿದೆ. ಈ ಬೃಹತ್ ರಿಯಾಯಿತಿಯು ಕರ್ವ್ ಇವಿಯ ಬೇಸ್ ಮಾಡೆಲ್ ಆದ ‘ಕ್ರಿಯೇಟಿವ್ 45’ ರೂಪಾಂತರವನ್ನು ಹೊರತುಪಡಿಸಿ, ಉಳಿದೆಲ್ಲಾ ರೂಪಾಂತರಗಳ ಮೇಲೂ ಲಭ್ಯವಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಟಾಟಾ ಕರ್ವ್ ಇವಿಯ ಎಕ್ಸ್ಶೋರೂಂ ಬೆಲೆ 17.49 ಲಕ್ಷ ರೂ. ಗಳಿಂದ ಆರಂಭವಾಗಿ, ಟಾಪ್-ಸ್ಪೆಕ್ ‘ಎಂಪವರ್ಡ್+ ಎ ಡಾರ್ಕ್’ (Empowered+ A Dark) ರೂಪಾಂತರಕ್ಕೆ 22.24 ಲಕ್ಷ ರೂ. ವರೆಗಿದೆ.
ಇತರೆ ಟಾಟಾ ಇವಿ ಕಾರುಗಳ ಮೇಲಿನ ಆಫರ್ಗಳು
ಕರ್ವ್ ಇವಿ ಮಾತ್ರವಲ್ಲದೆ, ಪಂಚ್ ಇವಿ, ಹ್ಯಾರಿಯರ್ ಇವಿ, ನೆಕ್ಸಾನ್ ಇವಿ ಹಾಗೂ ಟಿಯಾಗೊ ಇವಿ ಕಾರುಗಳ ಮೇಲೂ ಟಾಟಾ ಮೋಟಾರ್ಸ್ ಭಾರಿ ಡಿಸ್ಕೌಂಟ್ ನೀಡುತ್ತಿದೆ. ಹಳೆಯ ಪ್ರಿ-ಫೇಸ್ಲಿಫ್ಟ್ ಮಾಡೆಲ್ನ ಪಂಚ್ ಇವಿಗಳ ಸ್ಟಾಕ್ ಕ್ಲಿಯರೆನ್ಸ್ ಮಾಡಲು ಕಂಪನಿ ಮುಂದಾಗಿದ್ದು, ಲಾಂಗ್ ರೇಂಜ್ (LR) ಮಾಡೆಲ್ಗಳ ಮೇಲೆ ಒಟ್ಟು 1.55 ಲಕ್ಷ ರೂ. ವರೆಗಿನ ಡಿಸ್ಕೌಂಟ್ ನೀಡುತ್ತಿದೆ. ಇದರಲ್ಲಿ 1.10 ಲಕ್ಷ ರೂ. ಬೋನಸ್ ಹಾಗೂ 30,000 ರೂ. ಎಕ್ಸ್ಚೇಂಜ್ ಬೋನಸ್ ಒಳಗೊಂಡಿದೆ.
ಟಾಟಾ ಹ್ಯಾರಿಯರ್ ಇವಿ
ಟಾಟಾದ ಫ್ಲ್ಯಾಗ್ಶಿಪ್ ಎಲೆಕ್ಟ್ರಿಕ್ ಎಸ್ಯುವಿಯಾದ ಹ್ಯಾರಿಯರ್ ಇವಿಯ ಎಲ್ಲಾ ರೂಪಾಂತರಗಳ ಮೇಲೆ ಈ ತಿಂಗಳು ಒಟ್ಟು 1.5 ಲಕ್ಷ ರೂ. ವರೆಗೆ ಡಿಸ್ಕೌಂಟ್ ಲಭ್ಯವಿದೆ. ಇದು 1 ಲಕ್ಷ ರೂ. ಬೋನಸ್ ಮತ್ತು 50,000 ರೂ. ಎಕ್ಸ್ಚೇಂಜ್ ಬೋನಸ್ ಅನ್ನು ಒಳಗೊಂಡಿದೆ.
ಟಾಟಾ ಟಿಯಾಗೊ ಇವಿ
ಜನಪ್ರಿಯ ಎಲೆಕ್ಟ್ರಿಕ್ ಹ್ಯಾಚ್ಬ್ಯಾಕ್ ಟಿಯಾಗೊ ಇವಿಯ ‘XZ+ Tech Lux’ (ಲಾಂಗ್ ರೇಂಜ್) ರೂಪಾಂತರದ ಮೇಲೆ ಒಟ್ಟು 1.35 ಲಕ್ಷ ರೂ. ವರೆಗಿನ (1 ಲಕ್ಷ ಬೋನಸ್ + 20,000 ಎಕ್ಸ್ಚೇಂಜ್ ಬೋನಸ್) ಡಿಸ್ಕೌಂಟ್ ಅನ್ನು ಗ್ರಾಹಕರು ಪಡೆಯಬಹುದು.
ಟಾಟಾ ನೆಕ್ಸಾನ್ ಇವಿ
ಭಾರತದ ಅತಿ ಹೆಚ್ಚು ಮಾರಾಟವಾಗುವ ಎಲೆಕ್ಟ್ರಿಕ್ ಎಸ್ಯುವಿ ನೆಕ್ಸಾನ್ ಇವಿಯ ಎಲ್ಲಾ ರೂಪಾಂತರಗಳ ಮೇಲೆ ಒಟ್ಟು 65,000 ರೂ. ವರೆಗಿನ ಪ್ರಯೋಜನಗಳು ಲಭ್ಯವಿವೆ (20,000 ರೂ. ಗ್ರೀನ್ ಬೋನಸ್ ಮತ್ತು 30,000 ರೂ. ಎಕ್ಸ್ಚೇಂಜ್ ಬೋನಸ್).
ಇದನ್ನೂ ಓದಿ : ವಾಣಿಜ್ಯೋದ್ಯಮ ಅಭಿವೃದ್ಧಿ ಸಂಸ್ಥೆಯಲ್ಲಿ 2 ಹುದ್ದೆಗಳ ನೇಮಕಾತಿ.. 55 ಸಾವಿರ ರೂ. ಸಂಬಳ



















