ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ. ಕನ್ನಡ ಮಾತನಾಡಲ್ಲ ಎನ್ನುವ ವಿಚಾರಕ್ಕೆ ಸಾಕಷ್ಟು ಗಲಾಟೆಗಳೂ ನಡೆದಿವೆ. ಕರ್ನಾಟಕದಲ್ಲೇ ಇದ್ದು ಕನ್ನಡ ಬರಲ್ಲ ಎನ್ನುವವರು ಈ ಅಂತರಾಷ್ಟ್ರೀಯ ಕಂಪನಿಯವರ ಕನ್ನಡ ಪ್ರೀತಿಯನ್ನು ನೋಡಿ ಕಲಿಯಬೇಕು. ಸಿಹಿಯಾಗಿರೋ ಕನ್ನಡವನ್ನು ಸಿಹಿ ತಿನ್ನುತ್ತ ಕಲಿಯಿರಿ ಎಂದು ಈ ಕಂಪನಿ ಒಂದು ಒಳ್ಳೆಯ ನಿರ್ಧಾರ ಮಾಡಿದೆ.
ಈಗಾಗಲೇ ಶೇ. 60 % ರಷ್ಟು ಕನ್ನಡ ನಾಮಫಲಕ ಎನ್ನುವ ನಿಯಮವಿದೆ. ಆದಾಗ್ಯೂ ಹಂತ ಹಂತವಾಗಿ ಕನ್ನಡ ಮಾಯವಾಗಿದೆ. ಪರಭಾಷಿಕರಿಂದ ಸ್ವಂತ ನೆಲದಲ್ಲೇ ಕನ್ನಡಕ್ಕೆ ಗೌರವ, ಸ್ಥಾನಮಾನ ಸಿಗುತ್ತಿಲ್ಲ ಎನ್ನುವ ಆರೋಪವಿದೆ. ಆದರೆ, ಚಾಕೊಲೇಟ್ ಮೂಲಕ ಪರಭಾಷಿಕರಿಗೆ ಕನ್ನಡ ಕಲಿಸಲು ಈ ಕಂಪನಿ ಮುಂದಾಗಿದೆ. ಕನ್ನಡ ಕಲಿಸಲು ಇದೀಗ ಕನ್ನಡ ಟೀಚರ್ ಆಗಿದೆ ಡೈರಿ ಮಿಲ್ಕ್ ಚಾಕೊಲೇಟ್. ಚಾಕೋಲೇಟ್ ಕವರ್ ಮೇಲೆ ಕನ್ನಡದಲ್ಲಿ ಪ್ರತಿನಿತ್ಯ ಬಳಸುವ ಸರಳ ಪದಗಳನ್ನು ಇಂಗ್ಲಿಷ್‌ನಲ್ಲಿ ಮುದ್ರಿಸಲಾಗಿದೆ.
ಚಾಕೊಲೇಟ್ ಕವರ್ ಮೇಲೆ ಸರಳ ಕನ್ನಡ ಬರೆಯಲಾಗಿದೆ. ಕನ್ನಡ ಭಾಷಾ ಕಲಿಕೆ ಸುಲಭವಾಗಬೇಕು, ಪರಭಾಷಿಕರಿಗೆ ಕನ್ನಡ ಭಾಷೆ ಕಲಿಕೆಗೆ ಪ್ರೋತ್ಸಾಹ ನೀಡಬೇಕು ಎಂಬ ಉದ್ದೇಶದಿಂದ ಪ್ರಯತ್ನಿಸಲಾಗಿದೆ. ಕನ್ನಡ ಕಲಿಯಲು ಬಯಸುವ ವಲಸಿಗರಿಗೂ ಇದು ಅನುಕೂಲವಾಗಲಿದೆ. ಒಂದು ರೂಪಾಯಿ ಖರ್ಚು ಮಾಡದಿದ್ದರು ಕನ್ನಡ ಕಲಿಯಬಹುದು, ಮಾತನಾಡಬಹುದಾಗಿದೆ.
“ಚಾಕಲೇಟ್ ಮೇಲೆ ಇರುವ ಕನ್ನಡ ಪದಗಳು :”
- thank you (ಧನ್ಯವಾದ)
- what? (ಏನು)
- sorry (ಕ್ಷಮಿಸಿ)
- how are you? (ಹೇಗಿದ್ದೀರಿ)
- little (ಸ್ವಲ್ಪ)
- need help? (ಸತ್ಯ ಬೇಕೆ ?)
- evening (ಸಂಜೆ)
- morning (ಬೆಳಗ್ಗೆ)
- night (ರಾತ್ರಿ)