ಇತ್ತೀಚೆಗೆ ಕಾವೇರಿ ಕುಡಿಯುವ ನೀರು ಜಲಮಂಡಳಿಯಿಂದ ಕಾವೇರಿ ನೀರಿನ ಕಳ್ಳತನ ಪತ್ತೆಗೆ ಟಾಸ್ಕ್ ಫೋರ್ಸ್ ರಚನೆ ಮಾಡಲಾಗಿದೆ.
ನಗರದಲ್ಲಿ ಅನಧಿಕೃತ ನೀರಿನ ಸಂಪರ್ಕ ಹೆಚ್ಚಾಗಿವೆ. ಹಲವರು ತ್ಯಾಜ್ಯ ನೀರನ್ನು ಸ್ಯಾನಿಟರಿ ಕೊಳವೆಗೆ ಹರಿಸುತ್ತಿದ್ದಾರೆ. ಇದರಿಂದ ಜಲಮಂಡಳಿಗೆ ಮಾಸಿಕ ಕೋಟ್ಯಾಂತರ ಹಣ ನಷ್ಟವಾಗುತ್ತಿದೆ. ಹೀಗಾಗಿ ಇವುಗಳ ಪತ್ತೆಗೆ ಬ್ಲೂ ಪೋರ್ಸ್ ಪಡೆ ರಚನೆ ಮಾಡಲಾಗಿದೆ. ಈಗಾಗಲೇ ಜಲಮಂಡಳಿ ವ್ಯಾಪ್ತಿಯಲ್ಲಿ 43 ಬ್ಲೂ ಪೋರ್ಸ್ ಪಡೆಗಳು ಕಾರ್ಯ ನಿರ್ವಹಿಸುತ್ತಿವೆ. ಪ್ರತಿ ಪಡೆಯಲ್ಲಿ ಒಬ್ಬ ಮಾಜಿ ಸೈನಿಕ ಹಾಗೂ ಜಲಮಂಡಲಿಯ ಮೂವರು ಅಧಿಕಾರಿಗಳು ಇರುತ್ತಾರೆ.
ಈ ತಂಡಗಳು ತಮ್ಮ ವಲಯ ವ್ಯಾಪ್ತಿಯ ಅನಧಿಕೃತ ನೀರಿನ ಸಂಪರ್ಕ ಪತ್ತೆ ಹಚ್ಚುತ್ತವೆ. ಪ್ರತಿ ಮನೆಗೆ ಕಾವೇರಿ ನೀರಿನ ಸಂಪರ್ಕ ಪಡೆದಿದ್ದಾರೋ? ಅಥವಾ ಇಲ್ಲವೋ? ಇಲ್ಲವಾದರೆ ಕಟ್ಟಡಕ್ಕೆ ನೀರಿನ ಮೂಲ ಯಾವುದು? ಆ ಕಟ್ಟಡಕ್ಕೆ ನೀರಿನ ಮೂಲ ಯಾವುದು? ಅನ್ನೋದು ಪತ್ತೆ ಮಾಡಬೇಕು. ಒಂದು ವೇಳೆ ಅನಧಿಕೃತವಾಗಿ ನೀರಿನ ಸಂಪರ್ಕ ಪಡೆದಿದ್ದರೆ ದಂಡ ವಿಧಿಸಲಾಗುತ್ತದೆ.
ನಗರದಲ್ಲಿ ಪೂರೈಕೆ ಆಗುತ್ತಿರುವ ಕಾವೇರಿ ನೀರಿನ ಶೇ. 28ರಷ್ಟು ನೀರಿನ ಪ್ರಮಾಣದ ಲೆಕ್ಕ ಜಲ ಮಂಡಳಿಗೆ ಸಿಗುತ್ತಿಲ್ಲ. ಈ ನೀರು ಯಾವ ರೀತಿ ಕಳ್ಳತನವಾಗುತ್ತಿದೆ ಎಂಬುವುದನ್ನು ಪತ್ತೆ ಹಚ್ಚುವುದು ಬ್ಲೂ ಪೋರ್ಸ್ ನ ಕೆಲಸವಾಗಿದೆ.