ಪಾಕಿಸ್ತಾನ್ : ಇಸ್ಲಾಮಾಬಾದ್‌ನಲ್ಲಿ ಮತ್ತೆ ರಕ್ತಪಾತ ! ಪಾಕ್‌ನಲ್ಲಿ 12 ಜನರ ಸಾವಿಗೆ ಕಾರಣವಾದ ಆತ್ಮಾಹುತಿ ಬಾಂಬ್ ದಾಳಿಯ ಹೊಣೆಯನ್ನು ಪಾಕಿಸ್ತಾನಿ ತಾಲಿಬಾನ್ ಹೊತ್ತಿದೆ. ಮತ್ತಷ್ಟು ದಾಳಿಗಳನ್ನು ನಡೆಸುವ ಎಚ್ಚರಿಕೆಯನ್ನೂ ತಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ ನೀಡಿದೆ. ಪಾಕಿಸ್ತಾನ ಸರ್ಕಾರದ ಉಗ್ರ ವಿರೋಧಿ ನೀತಿಗೆ ಇದು ದೊಡ್ಡ ಸವಾಲಾಗಿದೆ.
ಇಸ್ಲಾಮಾಬಾದ್‌ನಲ್ಲಿ ಭಾನುವಾರ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಕನಿಷ್ಠ 12 ಮಂದಿ ಸಾವನ್ನಪ್ಪಿದ್ದು, ಹಲವಾರು ಮಂದಿ ಗಾಯಗೊಂಡಿದ್ದಾರೆ. ಇದು ಪಾಕ್ ರಾಜಧಾನಿಯ ಮೇಲೆ ಉಗ್ರಗಾಮಿ ಗುಂಪು ನಡೆಸಿದ ಅಪರೂಪದ ದಾಳಿಯಾಗಿದೆ. ಪಾಕಿಸ್ತಾನದ ಇಸ್ಲಾಮಿಕ್ ಅಲ್ಲದ ಕಾನೂನುಗಳ ಅಡಿಯಲ್ಲಿ ತೀರ್ಪುಗಳನ್ನು ಜಾರಿಗೊಳಿಸಿದ ನ್ಯಾಯಮೂರ್ತಿಗಳು, ವಕೀಲರು, ಅಧಿಕಾರಿಗಳು, ಮತ್ತು ಭದ್ರತಾ ವಾಹನಗಳು ಇವರ ಗುರಿ. ಇದೀಗ ದೇಶದ ಪ್ರಮುಖ ನಗರಗಳಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಇಸ್ಲಾಮಾಬಾದ್, ಲಾಹೋರ್ ಹಾಗೂ ಪೇಶಾವರ್ ಪ್ರದೇಶಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.
ಇಸ್ಲಾಮಾಬಾದ್ ನ್ಯಾಯಾಲಯದ ಹೊರಗೆ ನಡೆದ ಆತ್ಮಾಹುತಿ ಬಾಂಬ್ ದಾಳಿ ಭಾರತವೇ ಮಾಡಿದೆ ಅಂತ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಮತ್ತೆ ಆರೋಪಿಸಿದ್ದಾರೆ. ಅಫ್ಘಾನಿಸ್ತಾನದ ಗಡಿಯ ಬಳಿಯ ವಾನಾದ ಕ್ಯಾಡೆಟ್ ಕಾಲೇಜಿನ ಮೇಲೆ ಸೋಮವಾರ ನಡೆದ ದಾಳಿಯಲ್ಲಿ ಭಾರತದ ಪಾತ್ರವಿದೆ ಈ ದಾಳಿಗಳು ಪಾಕಿಸ್ತಾನವನ್ನು ಅಸ್ಥಿರಗೊಳಿಸುವ ಗುರಿಯನ್ನು ಹೊಂದಿರುವ ಭಾರತದ ರಾಜ್ಯ ಪ್ರಾಯೋಜಿತ ಭಯೋತ್ಪಾದನೆಯ ಮುಂದುವರಿಕೆಯಾಗಿದೆ” ಅಂತ ಹೇಳಿದ್ದಾರೆ.ಆದ್ರೆ, ಈ ಹುಸಿ ಆರೋಪಕ್ಕೆ ಯಾವುದೇ ಪುರಾವೆಗಳನ್ನು ಅವರು ನೀಡಿಲ್ಲ. ಇಷ್ಟೇಲ್ಲ ನಡೆದರು ಭಾರತದ ಮೇಲೆ ಸುಳ್ಳು ಆರೋಪ ಹೊರೆಸೋದು ಮಾತ್ರ ಮೂರ್ಖ ಪಾಕಿಸ್ತಾನ ಬಿಡ್ಲಿಲ್ಲ.
ದಕ್ಷಿಣ ಏಷ್ಯಾದಲ್ಲಿ ಭಯೋತ್ಪಾದನೆಯ ತಾಣವಾಗಿರುವ ಪಾಕಿಸ್ತಾನವು ಬಹಳ ಹಿಂದಿನಿಂದಲೂ ಭಯೋತ್ಪಾದನೆಯ ರಫ್ತುದಾರನಾಗಿದೆ. ತಾನೇ ಭಯೋತ್ಪಾದಕರಿಗೆ ಆಶ್ರಯ ನೀಡಿದರೂ ಆ ಉಗ್ರರು ಪಾಕಿಸ್ತಾನದ ಮೇಲೆ ದಾಳಿ ನಡೆಸಿದಾಗ ಮಾತ್ರ ಅದಕಲ್ಕೆಲ್ಲ ಕಾರಣ ಭಾರತವಂತೆ ಹೊಣೆಗಾರರನ್ನಾಗಿ ಮಾಡುವುದು ಪಾಕಿಸ್ತಾನಕ್ಕೆ ಹೊಸತೇನಲ್ಲ. ಈ ಹಿಂದೆ ಅಕ್ಟೋಬರ್‌ನಲ್ಲಿ ನಡೆದ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನಗಳು ಇತ್ತೀಚಿನ ದಾಳಿಗಳಿಂದಾಗಿ ಪ್ರಮುಖ ಘರ್ಷಣೆಯಲ್ಲಿ ಭಾಗಿಯಾಗಿದ್ದವು. ಆವಾಗಲೂ ಭಾರತವೇ ಕಾರಣ ಎಂದ ಪಾಕ್‌ಗೆ ಅಫ್ಘಾನಿಸ್ತಾನ್ ತಕ್ಕ ಪ್ರತಿಕ್ರಿಯೆ ನೀಡಿತ್ತು..
ಸೋಮವಾರ ದೆಹಲಿಯಲ್ಲಿ ಸಂಭವಿಸಿದ ಕಾರು ಸ್ಫೋಟದಲ್ಲಿ 10ಕ್ಕೂ ಅಧಿಕ ಜನರು ಸಾವನ್ನಪ್ಪಿ 20 ಜನರು ಗಾಯಗೊಂಡ ನಂತರ ಮಾರನೇ ದಿನವೇ ಪಾಕ್‌ನಲ್ಲಿ ಆತ್ಮಹುತಿ ಬಾಂಬ್ ದಾಳಿ ಸಂಭವಿಸಿದೆ. ಪಾಕಿಸ್ತಾನದಲ್ಲಿ ಕೊನೆಯ ಆತ್ಮಹುತಿ ದಾಳಿ ನಡೆದಿದ್ದು ಡಿಸೆಂಬರ್ 2022 ರಲ್ಲಿ. ಅಫ್ಘಾನ್ ನೆಲದಲ್ಲಿ ಆಶ್ರಯ ಪಡೆದಿದ್ದಾರೆ ಎನ್ನಲಾದ ತಾಲಿಬಾನ್ ಸಶಸ್ತ್ರ ಗುಂಪುಗಳನ್ನು ಈ ಕೃತ್ಯ ಮೆರೆದಿದೆ.
ಇಸ್ಲಾಮಾಬಾದ್‌ನಲ್ಲಿ ನಡೆದ ಈ ದಾಳಿ ಪಾಕಿಸ್ತಾನಕ್ಕೆ ಮತ್ತೊಂದು ಎಚ್ಚರಿಕೆ ಗಂಟೆಯಾಗಿದೆ. ಕಳೆದ ವರ್ಷ ತಾಲಿಬಾನ್ ಮತ್ತು ಪಾಕಿಸ್ತಾನ ಸರ್ಕಾರದ ನಡುವೆ ನಡೆದ ಶಾಂತಿ ಮಾತುಕತೆ ವಿಫಲವಾದ ನಂತರ ದಾಳಿಗಳು ಮತ್ತೆ ಹೆಚ್ಚುತ್ತಿವೆ.ಅಲ್ಲದೇ ಇದೀಗ ಸ್ಥಳೀಯರು ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಕಳೆದ ಕೆಲವು ತಿಂಗಳಿನಿಂದ ಪಾಕಿಸ್ತಾನಿ ತಾಲಿಬಾನ್ ಚಟುವಟಿಕೆಗಳಿಂದ ಪಾಕ್ ಜನರು ಆತಂಕ್ಕೊಳಗಾಗಿದ್ದಾರೆ.
ಪಾಕಿಸ್ತಾನದಲ್ಲಿ ಉಗ್ರರ ನೆರಳು ಮತ್ತೆ ದಟ್ಟವಾಗುತ್ತಿದೆ. ಒಂದು ದಾಳಿ ನಡೆದ ತಕ್ಷಣ ಮತ್ತೊಂದು ಎಚ್ಚರಿಕೆ ಇದೇ ತಾಲಿಬಾನ್‌ನ ಹೊಸ ತಂತ್ರ. ಸರ್ಕಾರದ ಒಳಗಿನ ರಾಜಕೀಯ ಅಸ್ಥಿರತೆ, ಗಡಿಭಾಗದ ಸುರಕ್ಷತಾ ಕೊರತೆ, ಮತ್ತು ಆರ್ಥಿಕ ಸಂಕಷ್ಟ ಈ ಎಲ್ಲದನ್ನೂ ಉಗ್ರ ಸಂಘಟನೆಗಳು ತಮ್ಮ ಪರವಾಗಿ ಬಳಸಿಕೊಳ್ಳುತ್ತಿವೆ. ಪಾಕಿಸ್ತಾನ ಸರ್ಕಾರ ಈಗ ಉಗ್ರರ ವಿರುದ್ಧ ತೀವ್ರ ಕ್ರಮ ಕೈಗೊಳ್ಳುವುದು ಬಿಟ್ಟು ಭಾರತದ ಮೇಲೆ ಆರೋಪಿಸುವ ನಾಟಕವನ್ನೇ ಮುಂದುವರೆಸಿದರೆ ಪಾಕ್ ಅತಂತ್ರವಾಗುವುದಂತೂ ಖಚಿತ..
ಇದನ್ನೂ ಓದಿ : ಮಹೇಶ್ ಶೆಟ್ಟಿ ತಿಮರೋಡಿ ತಂಡಕ್ಕೆ ಶಾಕ್ | SIT ತನಿಖೆಗೆ ನೀಡಿದ್ದ ತಡೆಯಾಜ್ಞೆ ತೆರವುಗೊಳಿಸಿದ ಹೈಕೋರ್ಟ್!


















