ಉಡುಪಿ: ಬೈಂದೂರಿನ ಸರ್ಕಾರಿ ಆಸ್ಪತ್ರೆಯ ಹತ್ತಿರದಲ್ಲಿರುವ ಸಿಟಿ ಪಾಯಿಂಟ್ ನಲ್ಲಿ ಅಜಿನೋರಾ ತರಬೇತಿ ಸಂಸ್ಥೆ ನೇತೃತ್ವದಲ್ಲಿ ಪಿಯುಸಿಯಲ್ಲಿ ಶೇ. 90ಕ್ಕಿಂತ ಹೆಚ್ಚು ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಪ್ರೋತ್ಸಾಹಿಸಲಾಯಿತು.
ಈ ಅಚೀವರ್ ಮೀಟ್ ಕಾರ್ಯಕ್ರಮವನ್ನು ಶಾಸಕ ಗುರುರಾಜ್ ಗಂಟೆಹೊಳೆ ಉದ್ಘಾಟಿಸಿ ಮಾತನಾಡಿದರು. ಇಂಥದೊಂದು ಅದ್ಭುತ ಕಾರ್ಯಕ್ರಮ ಆಯೋಜಿಸಿ ವಿದ್ಯಾರ್ಥಿಗಳಿಗೆ ಮತ್ತಷ್ಟು ಪ್ರೋತ್ಸಾಹ ಹಾಗೂ ಸ್ಪೂರ್ತಿ ತುಂಬುತ್ತಿರುವುದು ಶ್ಲಾಘನೀಯ. ಈ ಹಿಂದೆ ಬೈಂದೂರಿನಲ್ಲಿ ಬೃಹತ್ ಉದ್ಯೋಗ ಮೇಳದ ಯಶಸ್ಸಿಗೆ ಶ್ರಮಿಸಿದ್ದ ಅಜಿನೋರಾ ಸಂಸ್ಥೆಯು ಇಂದು ನಮ್ಮದೇ ಊರಿನಲ್ಲಿ ಕಚೇರಿ ತೆರೆಯುವ ಮೂಲಕ ಉದ್ಯೋಗಾಕಾಂಕ್ಷಿಗಳಲ್ಲಿ ಹೊಸ ಭರವಸೆ ಮೂಡಿಸಿದೆ.
ಈಗ ಪ್ರತಿಭಾವಂತರ ಪ್ರತಿಭೆ ಅನಾವರಣ ಮಾಡುವ ಕಾರ್ಯ ಮಾಡುತ್ತಿದೆ. ಈ ಭಾಗದ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿ, ಒಳ್ಳೆಯ ಉದ್ಯೋಗ ಪಡೆಯುವಂತಾಗಲಿ ಎಂದಿದ್ದಾರೆ.
ಈ ವೇಳೆ ಹಲವು ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿ ತಮ್ಮ ಅಭಿಪ್ರಾಯ ಹಂಚಿಕೊಂಡರು. ವೆಂಕಟೇಶ್ ಕಿಣಿ, ಅಜೊ ಆಗಸ್ಟಿನ್, ಮೊಹಮ್ಮದ್ ಶಾಫಿ, ಸಾಂಡ್ರ ಜಾಕೋಬ್, ವಿರಾಜ್, ಪ್ರಿಂಷಾ ಸೇರಿದಂತೆ ಹಲವರು ಇದ್ದರು.