ಬೆಂಗಳೂರು : ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಅದ್ದೂರಿಯಾಗಿ ಸೆಟ್ಟೇರಿದ್ದ ‘ಗಾರ್ಡನ್’ ಚಿತ್ರದ ಚಿತ್ರೀಕರಣ ಭರದಿಂದ ಸಾಗಿದೆ. ಅದ್ರಂತೆ ಈಗ ಮೊದಲ ಹಂತದ ಚಿತ್ರೀಕರಣ ಮುಗಿಸಿದೆ. ಪೌರಕಾರ್ಮಿಕರ ಬದುಕು ಬವಣೆ ಹೇಳೋ ಸಿನಿಮಾ ಗಾರ್ಡನ್. ಆರ್ಯ ಮಹೇಶ್ ನಿರ್ದೇಶನದಲ್ಲಿ, ಟಕ್ಕರ್ ಮನೋಜ್ ನಟನೆಯಲ್ಲಿ ‘ಗಾರ್ಡನ್’ ಮೂಡಿಬರ್ತಿದೆ. ಮುಹೂರ್ತದ ದಿನವೇ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಮಾಡಿದ್ದ ಚಿತ್ರತಂಡ ಇದೀಗ ಒಂದಷ್ಟು ಮೇಕಿಂಗ್ ವಿಡಿಯೋ ತುಣುಕು ಹಾಗೂ ವರ್ಕಿಂಗ್ ಸ್ಟಿಲ್ ಗಳನ್ನ ರಿವೀಲ್ ಮಾಡಿದೆ.

ಮೇಲ್ನೋಟಕ್ಕೆ ಇದು ಬೆಂಗಳೂರಿನ ಕಸ ವಿಲೇವಾರಿ ಮತ್ತು ಅದರ ಸುತ್ತಲಿನ ಮಾಫಿಯಾದ ಸುತ್ತ ಇರುವ ಕಥಾಹಂದರ ಈ ಮೇಕಿಂಗ್ ವಿಡಿಯೋದಲ್ಲಿ ಕಾಣ್ತಿದೆ. ತೂಗುದೀಪ ಮನೆಯ ಕುಡಿ ಮನೋಜ್ಹೆ ಈ ಚಿತ್ರದಲ್ಲಿ ಇಬ್ಬರು ನಾಯಕಿಯರು. ಅನು ಪ್ರೇಮಾ ಮತ್ತು ಸೋನಮ್ ರೈ ಇಬ್ಬರೂ ಮನೋಜ್ ಜೊತೆಗೆ ಕಾಣಿಸಿಕೊಳ್ತಿದ್ದಾರೆ.

ಜಿ ಮುನಿರಾಜು ನಿರ್ಮಿಸ್ತಿರೋ ಗಾರ್ಡನ್ ಚಿತ್ರಕ್ಕೆ ಮುಂಜಾನೆ ಮಂಜು ಛಾಯಾಗ್ರಹಣ, ವೈಲೆಂಟ್ ವೇಲು ಸಾಹಸ, ಟಗರು ರಾಜು ನೃತ್ಯ, ಜಿ.ಗಿರೀಶ್ ಕುಮಾರ್ ಸಂಕಲ ಚಿತ್ರಕ್ಕಿದೆ. ಮೊದಲ ಚಿತ್ರೀಕರಣ ಮುಗಿಸಿ ಎರಡನೇ ಹಂತದ ಚಿತ್ರೀಕರಣಕ್ಕೆ ಸಜ್ಜಾಗ್ತಿರೋ ಗಾರ್ಡನ್ ಚಿತ್ರತಂಡ ಹೊಸ ವರ್ಷದ ಪ್ರಯುಕ್ತ ಇಷ್ಟು ಮಾಹಿತಿ ನೀಡಿದೆ. ಅಂದ್ಹಾಗೆ ಗಾರ್ಡನ್ ಚಿತ್ರವನ್ನ ಬೇಸಿಗೆಗೆ ತೆರೆಗೆ ತರೋ ಸನ್ನಾಹದಲ್ಲಿದೆ ಚಿತ್ರತಂಡ.
ಇದನ್ನೂ ಓದಿ : ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಅಶ್ಲೀಲ ಕಾಮೆಂಟ್ ಮಾಡಿದ್ದ ಇಬ್ಬರ ಬಂಧನ!



















