ಕೊಪ್ಪಳ: ವ್ಯಕ್ತಿಯೋರ್ವ ಉಪ ತಹಶೀಲ್ದಾರ್ ಮೇಲೆ ಕಬ್ಬಿಣದ ರಾಡ್ ನಿಂದ ಹಲ್ಲೆ ನಡೆಸಿರುವ ಘಟನೆಯೊಂದು ಜಿಲ್ಲೆಯಲ್ಲಿ ನಡೆದಿದೆ.
ಕೊಪ್ಪಳ ನಗರದ ಉಪ ತಹಶೀಲ್ದಾರ್ ರೇಖಾ ದೀಕ್ಷಿತ್ ಎನ್ನುವರ ಮೇಲೆ ವ್ಯಕ್ತಿಯೋರ್ವ ರಾಡ್ನಿಂದ ಹಲ್ಲೆ ಮಾಡಿದ್ದಾನೆ. ಪ್ರಭು ಚೆನ್ನದಾಸರ್ ಎಂಬ ವ್ಯಕ್ತಿ ಏಕಾಏಕಿ ತಹಸೀಲ್ದಾರ್ ಕಚೇರಿಗೆ ನುಗ್ಗಿ ಹಲ್ಲೆ ಮಾಡಿದ್ದಾನೆ. ಉಪ ತಹಸೀಲ್ದಾರ್ ರೇಖಾ ಮೇಲೆ ಹಲ್ಲೆ ಮಾಡಿದ್ದಾನೆ. ಕಬ್ಬಿಣದ ರಾಡ್ ನಿಂದ ಹಲ್ಲೆ ಮಾಡಿದ್ದರಿಂದಾಗಿ ರೇಖಾ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸದ್ಯ ರೇಖಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೊಂದಡೆ ಈ ಘಟನೆಯಿಂದ ಕಚೇರಿ ಸಿಬ್ಬಂದಿ ಬೆಚ್ಚಿಬಿದ್ದಿದ್ದಾರೆ.
ಹಲ್ಲೆ ಮಾಡಿರುವ ಪ್ರಭು ಚೆನ್ನದಾಸರ್, ರೇಖಾ ಅವರ ಆಪ್ತ. ಸಂಜೆ 5 ಗಂಟೆಯ ಹೊತ್ತಿಗೆ ಕಚೇರಿಯಲ್ಲಿ ರೇಖಾ ಬ್ಯುಸಿಯಾಗಿದ್ದರು. ಈ ವೇಳೆ ಪ್ರಭು, ಕಬ್ಬಿಣದ ರಾಡ್ ಹಿಡಿದು ಕಚೇರಿಗೆ ನುಗ್ಗಿ ಏಕಾಏಕಿ ರೇಖಾ ಮೇಲೆ ದಾಳಿ ಮಾಡಿದ್ದಾರೆ. ರಾಡ್ ನಿಂದ ರೇಖಾಳ ತಲೆಗೆ 3 ಬಾರಿ ಹೊಡೆದಿದ್ದಾನೆ. ರೇಖಾ ಕುಸಿದು ಬಿದ್ದರೂ ಥಳಿಸಿದ್ದಾನೆ. ಕೂಡಲೇ ಕಚೇರಿ ಸಿಬ್ಬಂದಿ ರೇಖಾರನ್ನು ರಕ್ಷಿಸಿ, ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.
ಈತ ರೇಖಾ ಅವರಿಗೆ ಮೂರು ವರ್ಷದಿಂದ ರೇಖಾಗೆ ಪರಿಚಯಸ್ಥ. ಪ್ರತಿದಿನ ಈತನೇ ರೇಖಾರನ್ನು ಕಚೇರಿಗೆ ಕರೆದುಕೊಂಡು ಬರುತ್ತಿದ್ದ. ಜತೆಗೆ ಮನೆ ಕೆಲಸಗಳನ್ನು ನೋಡಿಕೊಳ್ಲುತ್ತಿದ್ದ. ರೇಖಾ ಈತನಿಗೆ ಹಣಕಾಸಿನ ನೆರವನ್ನೂ ಮಾಡಿದ್ದರು ಎನ್ನಲಾಗಿದೆ. ಆದರೆ, ಈತ ಏಕಾಏಕಿ ಈ ರೀತಿ ಏಕೆ ವರ್ತಿಸಿದ ಎಂಬ ಚರ್ಚೆ ಶುರುವಾಗಿದೆ. ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ತನಿಖೆ ನಡೆಸುತ್ತಿದ್ದಾರೆ.