ವಾಷಿಂಗ್ಟನ್: ತಬಲಾ ಮಾಂತ್ರಿಕ ಜಾಕೀರ್ ಹುಸೇನ್ (73) (Tabla maestro Zakir Hussain) ಇಹಲೋಕ ತ್ಯಜಿಸಿದ್ದಾರೆ.
ಜಾಕೀರ್ ಹುಸೇನ್ ಅವರು ತೀವ್ರ ಹೃದಯ (Heart) ಸಂಬಂಧಿ ಸಮಸ್ಯೆಗಳಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಅವರನ್ನು ಸ್ಯಾನ್ ಫ್ರಾನ್ಸಿಸ್ಕೋದ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಿಗೆ ಐಸಿಯುವಿನಲ್ಲಿ (ICU) ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಖ್ಯಾತ ತಬಲ ವಾದಕ ಜಾಕೀರ್ ಹುಸೇನ್ ಅವರಿಗೆ ರಕ್ತದೊತ್ತಡ ತೀವ್ರವಾಗಿ ಕಂಡು ಬಂದಿತ್ತು. ಅಲ್ಲದೇ, ಹೃದಯ ಸಂಬಂಧಿ ಸಮಸ್ಯೆಯಿಂದ ಅವರು ಸ್ಯಾನ್ ಫ್ರಾನ್ಸಿಸ್ಕೋದ ಆಸ್ಪತ್ರೆಗೆ ದಾಖಲಾಗಿದ್ದರು.
ತೀವ್ರವಾಗಿ ಅಸ್ವಸ್ಥರಾಗಿದ್ದ ಅವರನ್ನು ಐಸಿಯುನಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ತಬಲಾ ಮಾಂತ್ರಿಕ ವಿಧಿಯಾಟಕ್ಕೆ ಶರಣಾಗಿ, ಇಹಲೋಕ ತ್ಯಜಿಸಿದ್ದಾರೆ.