ಬೆಂಗಳೂರು : ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಜೂ.ಎನ್‌ಟಿಆರ್ ಹೊಸ ಆಸ್ಪತ್ರೆ ಕಿಮ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟನೆಗೆ ಭಾಗಿಯಾಗಿದ್ದು, ಅಭಿಮಾನಿಗಳ ಅತಿರೇಕದ ಹಾವಳಿಯನ್ನು, ಪೊಲೀಸರು ಹತೋಟಿ ತರಲು ಲಾಠಿ ಚಾರ್ಜ್ ಮಾಡಬೇಕಾದ ಘಟನೆ ನಡೆದಿದೆ.
ಆಸ್ಪತ್ರೆ ಒಳಗೆ ಪ್ರವೇಶಿಸಲು ಉತ್ಸುಕವಾಗಿ, ಸಾವಿರಾರು ಸಂಖ್ಯೆಯ ಅಭಿಮಾನಿಗಳು ಎಸ್ಕಲೇಟರ್ ಮುರಿದು ಹಾಕುವ ಮಟ್ಟದ ನೂಕು ನುಗ್ಗು ನಡೆಸಿದ್ದಾರೆ.
ಸ್ಥಳೀಯ ಪೊಲೀಸರು, ಭದ್ರತಾ ಕ್ರಮ ಕೈಗೊಂಡು, ಫ್ಯಾನ್ಸ್ ನಿಯಂತ್ರಿಸಲು ಲಾಠಿಚಾರ್ಜ್ ನಡೆಸಿದ್ದಾರೆ. ಈ ಮೂಲಕ ಜೂ. ಎನ್‌ಟಿಆರ್ ಅವರ ಭೇಟಿಯನ್ನು ಹಸುರಾಗಿ ನೋಡಲು ಬಂದ ಅಭಿಮಾನಿಗಳ ನಿಯಂತ್ರಣ ತರಲು ಮುಂದಾಗಿದ್ದಾರೆ.
ಇದನ್ನೂ ಓದಿ : ಪತ್ನಿ ರಾಧಿಕ ಪಂಡಿತ್ ಬರ್ತಡೇ ಸೆಲೆಬ್ರೇಟ್ ಮಾಡಿದ ರಾಕಿಂಗ್ ಸ್ಟಾರ್



















