ಮೈಸೂರು: ಇಂದು ನಡೆಯಲಿರುವ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗಲಿವೆ. ಗುಜರಾತ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುವ ಈ ಮಹತ್ವದ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಲಿ ಎಂದು ಶಾಸಕ ಟಿ.ಎಸ್. ಶ್ರೀವತ್ಸ ಶುಭ ಹಾರೈಸಿದ್ದಾರೆ.

ನಗರದ ಕೆ.ಜಿ. ಕೊಪ್ಪಲ್ ಪ್ರದೇಶದ ಮರುಳೇಶ್ವರ ಕ್ರೀಡಾಂಗಣದಲ್ಲಿ ಬಾಲಕರೊಂದಿಗೆ ಕ್ರಿಕೆಟ್ ಆಡಿ ಭಾರತ ತಂಡಕ್ಕೆ ಜಯವಾಗಲಿ ಎಂದು ಅವರು ಆಶಿಸಿದರು. ಈ ವೇಳೆ ಮಾತನಾಡಿದ ಅವರು, ಕೋಟ್ಯಾಂತರ ಭಾರತೀಯ ಅಭಿಮಾನಿಗಳ ಆಶೆ ಫಲಿಸಲಿ ಎಂದು ಹೇಳಿದರು.
ಭಾರತದ ಕ್ರಿಕೆಟ್ ತಂಡದ ಆಟಗಾರರ ಮೇಲೆ ತಾಯಿ ಚಾಮುಂಡೇಶ್ವರಿ ಆಶೀರ್ವಾದ ಇರಲಿ ಹಾಗೂ ತಂಡ ಗೆಲುವು ಸಾಧಿಸಿ ದೇಶಕ್ಕೆ ಗೌರವ ತಂದುಕೊಡಲಿ ಎಂದು ಶಾಸಕ ಶ್ರೀವತ್ಸ ಹಾರೈಸಿದರು.
ಇದನ್ನೂ ಓದಿ : ಟಿ20 ವಿಶ್ವಕಪ್ | ಇಂದು ಭಾರತ vs ನ್ಯೂಜಿಲ್ಯಾಂಡ್ ಫೈನಲ್ ಫೈಟ್, ಯಾರ ಕೈಗೆ ಟ್ರೋಫಿ?



















