ಬೆಂಗಳೂರು: ಮಹಿಳೆಯರಿ(Women) ಗಾಗಿ ರ್‍ಯಾಪಿಡೋ (Rapido) ಸಿಹಿ ಸುದ್ದಿ ನೀಡಿದೆ.
ಮಹಿಳಾ ಪ್ರಯಾಣಿಕರ ಸುರಕ್ಷತೆಗಾಗಿ ಮತ್ತು ಮಹಿಳಾ ಚಾಲಕರಿಗೆ ಉತ್ತೇಜನ ನೀಡುವುದಕ್ಕಾಗಿ ಪಿಂಕ್ ಬೈಕ್ ಟ್ಯಾಕ್ಸಿ (Rapido Pink Bike Taxi) ಆರಂಭಿಸುವುದಾಗಿ ರ್‍ಯಾಪಿಡೋ ತಿಳಿಸಿದೆ. ಈ ವರ್ಷದ ಅಂತ್ಯದಷ್ಟರಲ್ಲಿ ಪಿಂಕ್ ಬೈಕ್ ಟ್ಯಾಕ್ಸಿ ಆರಂಭವಾಗಲಿದೆ ಎಂದು ರ್‍ಯಾಪಿಡೋ ಹೇಳಿದೆ.
ಮಹಿಳಾ ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಹಾಗೂ ಮಹಿಳೆಯರಿಗಾಗಿ ಉದ್ಯೋಗ ಸೃಷ್ಟಿಸುವುದಕ್ಕಾಗಿ ಈ ಯೋಜನೆ ಜಾರಿಗೆ ಬರುತ್ತಿದೆ ಎಂದು ಹೇಳಲಾಗಿದೆ. ಜಾಗತಿಕ ಹೂಡಿಕೆ ಶೃಂಗಸಭೆಯಲ್ಲಿ ಈ ಹೊಸ ಯೋಜನೆಯನ್ನು ರ್‍ಯಾಪಿಡೋ ಘೋಷಿಸಿದೆ. ಉದ್ಯೋಗ ಸೃಷ್ಟಿಯ ಹೊರತಾಗಿ, ಕಂಪನಿಯು ಮಹಿಳೆಯರಿಗೆ ಸುರಕ್ಷಿತ ಮತ್ತು ಬೆಂಬಲ ನೀಡುವ ಕೆಲಸದ ವಾತಾವರಣ ನಿರ್ಮಿಸುವುದಕ್ಕಾಗಿ ಈ ರೀತಿಯ ಕಾರ್ಯಕ್ಕೆ ಮುಂದಾಗಿದೆ ಎನ್ನಲಾಗಿದೆ.