ಹಾವೇರಿ: ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಜಿಲ್ಲೆಯ ಮಾಸೂರು ಗ್ರಾಮದ ಯುವತಿ ಸ್ವಾತಿ ಹತ್ಯೆ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ.
ಹತ್ಯೆಯಾಗಿರುವ ಸ್ವಾತಿ ಬ್ಯಾಡಗಿ ಹಿಂದೂಪರ ಸಂಘಟನೆಗಳಲ್ಲಿ ಆ್ಯಕ್ಟಿವ್ ಆಗಿದ್ದಳು ಎನ್ನಲಾಗಿದೆ. ಈಗ ಸ್ವಾತಿ ಹಿಂದೂ ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದಳು ಎಂಬುವುದಕ್ಕೆ ಸಾಕ್ಷಿಯಾಗಿ ಹಲವು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ವೈರಲ್ ಆದ ಫೋಟೋಗಳಲ್ಲಿ ಸ್ವಾತಿ ಕೇಸರಿ ಪೇಟ ಮತ್ತು ಕೈಯಲ್ಲಿ ಖಡ್ಗ ಹಿಡಿದ ಫೋಸ್ ಕೊಟ್ಟಿದ್ದಾರೆ. ದುರ್ಗಾ ದೌಡು ಕಾರ್ಯಕ್ರಮದಲ್ಲಿಯೂ ಸ್ವಾತಿ ಭಾಗಿಯಾಗಿದ್ದಾರೆ. ಈ ಫೋಟೋಗಳು ಕೂಡ ಸಾಕಷ್ಟು ಅನುಮಾನಕ್ಕೆ ಕಾರಣವಾಗುತ್ತಿವೆ.