ವಿಜಯಪುರ : ಖಾಸಗಿ ಸಹಭಾಗಿತ್ವದ ಮೆಡಿಕಲ್ ಕಾಲೇಜ್ ಸ್ಥಾಪನೆಗೆ ವಿರೋಧಿಸಿ ನಡೆದ ಪ್ರತಿಭಟನೆ ವೇಳೆ ಸ್ವಾಮೀಜಿ ಮಫ್ತಿಯಲ್ಲಿದ್ದ PSI ಕೆನ್ನೆಗೆ ಬಾರಿಸಿದ ಘಟನೆ ವಿಜಯಪುರ-ಸೊಲ್ಲಾಪುರ ರಸ್ತೆಯಲ್ಲಿ ನಡೆದಿದೆ.
ಹೋರಾಟಗಾರರು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ ಪಾಟೀಲ್ ನಿವಾಸಕ್ಕೆ ಮುತ್ತಿಗೆ ಯತ್ನ ನಡೆಸಿದ್ದು, ಈ ವೇಳೆ ಪೊಲೀಸರು ಸ್ವಾಮೀಜಿ ಬೊಬೈಲ್ ಕಸಿದುಕೊಂಡಿದ್ದಾರೆ. ಇದರಿಂದ ಸಿಟ್ಟಾದ ಅವರು ಪೊಲೀಸ್ ಅಧಿಕಾರಿ ಕೆನ್ನೆಗೆ ಬಾರಿಸಿದ್ದಾರೆ ಎನ್ನಲಾಗಿದೆ.
ಖಾಸಗಿ ಸಹಭಾಗಿತ್ವದ ಮೆಡಿಕಲ್ ಕಾಲೇಜು ಸ್ಥಾಪನೆಗೆ ವಿರೋಧಿಸಿ ಕಳೆದ ನೂರಾರು ದಿನಗಳಿಂದ ಹೋರಾಟ ನಡೆದುಕೊಂಡುಬಂದಿದೆ. ಇದರ ಭಾಗವಾಗಿ ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆ ಹೋರಾಟ ಸಮಿತಿ ಮತ್ತು ಇತರ ಸಂಘಟನೆಗಳು ಇಂದು ಉಸ್ತುವಾರಿ ಸಚಿವರ ಮನೆ ಮುತ್ತಿಗೆ ಯತ್ನ ನಡೆಸಿವೆ. ಈ ವೇಳೆ ಹೋರಾಟಗಾರರನ್ನು ವಿಜಯಪುರ-ಸೊಲ್ಲಾಪುರ ರಸ್ತೆಯಲ್ಲಿಯೇ ಪೊಲೀಸರು ತಡೆದಿದ್ದು, ರಸ್ತೆ ಮಧ್ಯ ಹೋರಾಟ ಮಾಡದಂತೆ ಮನವಿ ಮಾಡಿದ್ದಾರೆ.
ಜೊತೆಗೆ ಹೋರಾಟದಲ್ಲಿ ಭಾಗಿಯಾಗಿದ್ದ ಬಸವನಬಾಗೇವಾಡಿ ತಾಲೂಕಿನ ಹುಣಶ್ಯಾಳ ಪಿಬಿ ಗ್ರಾಮದ ಸಂಗನಬಸವ ಸ್ವಾಮೀಜಿ ಮೊಬೈಲ್ ಕಸಿದಿದ್ದಾರೆ. ಇದರಿಂದ ಕೋಪಗೊಂಡ ಸ್ವಾಮೀಜಿ ಪೊಲೀಸ್ ಯೂನಿಫಾರ್ಮ್ ಧರಿಸಿರದ ಪಿಎಸ್ಐ ಸೀತಾರಾಮ್ ಲಮಾಣಿಗೆ ಕಪಾಳ ಮೋಕ್ಷ ಮಾಡಿದ್ದಾರೆ ತಿಳಿದುಬಂದಿದೆ.
ಇದನ್ನೂ ಓದಿ : ‘ಲವ್ ಕೇಸ್’ ಶೂಟಿಂಗ್ ಫಿನಿಷ್..!



















