ಬೆಂಗಳೂರು: ನಟಿ ರನ್ಯಾ ರಾವ್ ಅವರು ಗೋಲ್ಡ್ ಸ್ಮಗ್ಲಿಂಗ್‌ನಲ್ಲಿ ಭಾಗಿಯಾಗಿದ್ದಾಳೆ ಎಂಬುವುದನ್ನು ಆಧರಿಸಿ, ಆಕೆಯನ್ನು ಈಗಾಗಲೇ ಬಂಧಿಸಿದ್ದಾರೆ. ಆದರೆ ವಿಚಾರಣೆ ವೇಳೆ ಹಲವು ಮಹತ್ವದ ವಿಚಾರಗಳು ಬೆಳಕಿಗೆ ಬಂದಿದ್ದು, ಇದೀಗ ರಾಜಕಾರಣಿಗಳ ಕೈವಾಡ ಇರುವ ಬಗ್ಗೆ ಕೆಲ ಅಂಶಗಳನ್ನು ಮಾಡಿದ್ದಾರೆ.
ರನ್ಯಾ ರಾವ್ ಅವರು ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಇತ್ತ ಸಾಲು ಸಾಲು ರಾಜಕಾರಣಿಗಳಿಗೆ ಢವಢವ ಶುರುವಾಗಿದೆ. ಈಗ ಸಿಕ್ಕಿರುವ ಮೂಲಗಳ ಪ್ರಕಾರ ಇಬ್ಬರು ರಾಜಕಾರಣಿಗಳು ಈ ಪ್ರಕರಣದಲ್ಲಿ ಸಿಲುಕಿರುವ ಬಗ್ಗೆ ಅನುಮಾನ ಮೂಡಿದೆ.
ಈಗ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ನಟಿ ರನ್ಯಾ ರಾವ್ ಅವರ ಮಲ ತಂದೆ ರಾಮಚಂದ್ರ ರಾವ್, ನಮಗೂ ಅವಳಿಗೂ ಯಾವುದೇ ಸಂಬಂಧವಿಲ್ಲ ಎಂದಿದ್ದಾರೆ. ಜೊತೆಗೆ ಆಕೆಗೆ ಮದುವೆಯಾಗಿದೆ. ಕಳೆದ ಮೂರು ತಿಂಗಳ ಹಿಂದೆ ಬೆಂಗಳೂರಿನ ಖಾಸಗಿ ಹೊಟೇಲ್‌ನಲ್ಲಿ ಮದುವೆ ನಡೆದಿದ್ದು, ರಾಜಕಾರಣಿಗಳು ಕೂಡ ಭಾಗಿಯಾಗಿದ್ದರು ಎನ್ನಲಾಗಿದೆ. ಹೀಗಾಗಿ, ಸದ್ಯ ರನ್ಯಾ ರಾವ್ ಅವರ ಪ್ರಕರಣದಲ್ಲಿ ಅವರ ಮದುವೆಯ ವಿಡಿಯೋ ಕೂಡ ಪರಿಶೀಲನೆಗೆ ಬಳಕೆಯಾಗುವ ಸಾಧ್ಯತೆಗಳಿದೆ.
ಇಷ್ಟು ಮಾತ್ರವಲ್ಲದೇ ಪ್ರಕರಣದಲ್ಲಿ ಇಡಿ (ಜಾರಿ ನಿರ್ದೇಶನಾಲಯ) ಕೂಡ ಭಾಗಿಯಾಗುವ ಸಾಧ್ಯತೆಗಳು ಇದೀಗ ದಟ್ಟವಾಗಿದೆ. ನಟಿ ರನ್ಯಾ ರಾವ್‌ಗೆ ಗೋಲ್ಡ್ ತರುವಂತೆ ಪ್ರೇರೇಪಿಸಿದ್ದು ಯಾರು? ಆಕೆಗೆ ಹಣದ ಮೂಲ ಯಾವುದು? ಯಾರ್ಯಾರ ಬಳಿ ಆಕೆ ವ್ಯವಹಾರ ಮಾಡುತ್ತಿದ್ದಳು? ಹೀಗೆ ಹಲವು ಆಯಾಮದಲ್ಲಿ ತನಿಖೆ ನಡೆಸಲು ಸಿದ್ಧತೆ ನಡೆಸಲಾಗಿದೆ ಎನ್ನಲಾಗಿದೆ.