ನಿಗಮ-ಮಂಡಳಿಗಳ ಖಾಲಿ ಹುದ್ದೆಗಳ ಭರ್ತಿಗೆ ಪೂರ್ವ ತಯಾರಿ ಆರಂಭವಾಗಿದೆ. ಮೂರು ದಿನಗಳ ರಾಜ್ಯ ಪ್ರವಾಸದಲ್ಲಿರುವ ರಣದೀಪ್ ಸುರ್ಜೇವಾಲಾ, ನಿನ್ನೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಜೊತೆ ಪ್ರತ್ಯೇಕ ಸಭೆ ನಡೆಸಿದ್ದಾರೆ.
ಈ ವೇಳೆ, ಖಾಲಿ ಇರುವ ಹುದ್ದೆಗಳಿಗೆ ಪಕ್ಷ ನಿಷ್ಠರ ನೇಮಕದ ಬಗ್ಗೆ ಚರ್ಚಿಸಲಾಗಿದೆ. ಭವಿಷ್ಯದಲ್ಲಿ ಪಕ್ಷಕ್ಕೆ ಸ್ವತ್ತಾಗುವಂತಹ ಯುವಕರಿಗೆ ಮಣೆ ಹಾಕುವ ಬಗ್ಗೆ ಸಮಾಲೋಚನೆ ನಡೆದಿದ್ದು, ಪಟ್ಟಿಯನ್ನಿನ್ನೂ ಅಂತಿಮಗೊಳಿಸಲಾಗಿಲ್ಲ. ಸಿಎಂ ಹಾಗೂ ಡಿಸಿಎಂ ಇಬ್ಬರೂ ತಮ್ಮ ತಮ್ಮ ಶಿಫಾರಸುಗಳನ್ನು ಮಾಡಿದ್ದು ಇಂದು ಮತ್ತೊಂದು ಸುತ್ತಿನ ಮಾತುಕತೆ ಬಳಿಕ ಪಟ್ಟಿ ಅಂತಿಮವಾಗುವ ಸಾಧ್ಯತೆಗಳಿವೆ.