ನೋಯ್ಡಾ: ಬಾಲಕನೊಬ್ಬ ಕಣ್ಣಿನ ಶಸ್ತ್ರ ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಾಗಿದ್ದ. ಆದರೆ, ವೈದ್ಯರ ಯಡವಟ್ಟಿನಿಂದಾಗಿ ಬಾಲಕ ಫಜೀತಿ ಅನುಭವಿಸುವಂತಾಗಿದೆ.
ಬಾಲಕನ ಎಡಗಣ್ಣಿನ ಶಸ್ತ್ರ ಚಿಕಿತ್ಸೆ ಮಾಡುವ ಬದಲು ವೈದ್ಯರು ಬಲಗಣ್ಣಿಗೆ ಶಸ್ತ್ರ ಚಿಕಿತ್ಸೆ(Eye treatment) ಮಾಡಿದ್ದಾರೆ. ಹೀಗಾಗಿ ವೈದ್ಯನ ವಿರುದ್ಧ ಆಕ್ರೋಶ ವ್ಯಕ್ತವಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಗ್ರೇಟ್ ನೋಯ್ಡಾದ ಸೆಕ್ಟರ್ ಗಾಮಾ ಪ್ರದೇಶದಲ್ಲಿನ ಆನಂದ್ ಸ್ಪೆಕ್ಟ್ರಮ್ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. 7 ವರ್ಷದ ಬಾಲಕನಿಗೆ ಈ ರೀತಿ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಸದ್ಯ ಈ ಪ್ರಕರಣ ದೇಶಾದ್ಯಂತ ವ್ಯಾಪಕ ಟೀಕೆಗೆ ಒಳಗಾಗಿದೆ. ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯನ ವಿರುದ್ಧ ಕ್ರಮ ಕೈಗೊಳ್ಳುವಂತೆ ಜನರು ಆಗ್ರಹಿಸುತ್ತಿದ್ದಾರೆ.
ಬಾಲಕನ ಎಡಗಣ್ಣಿನಲ್ಲಿ ಪದೆ ಪದೇ ನಿರು ಬರುತ್ತಿತ್ತು. ಹೀಗಾಗಿ ಪಾಲಕರು ಮಗನನ್ನು ಅನಂದ್ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದುಕೊಂಡು ಹೋಗಿದ್ದರು. ಆದರೆ, ‘ವೈದ್ಯ ಆನಂದ್ ಶರ್ಮಾ ಬಾಲಕನ ಕಣ್ಣಿನಲ್ಲಿ ಚಿಕ್ಕದಾದ ಕಬ್ಬಿಣ ಲೋಹಕ್ಕೆ ಹೋಲುವ ವಸ್ತು ಇದೆ. ಅದನ್ನು ತಗೆಯಬೇಕಾದರೆ ಅಪರೇಷನ್ ಮಾಡಬೇಕು. ಈ ಚಿಕಿತ್ಸೆಗೆ 45 ಸಾವಿರ ವೆಚ್ಚವಾಗಲಿದೆ ಎಂದು ಹೇಳಿದ್ದಾರೆ. ಅದಕ್ಕೆ ಕುಟುಂಬಸ್ಥರು ಒಪ್ಪಿದ್ದಾರೆ. ಅದೇ ದಿನ ಬಾಲಕನಿಗೆ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಮನೆಗೆ ಹಿಂದುರಿಗಿದ ಬಳಿಕ ತಾಯಿ ಗಮನಿಸಿದ್ದಾಳೆ. ಎಡಗಣ್ಣಿನ ಬದಲು ಬಲಗಣ್ಣಿಗೆ ವೈದ್ಯರು ಶಸ್ತ್ರ ಚಿಕಿತ್ಸೆ ಮಾಡಿದ್ದಾರೆ ಎಂದು ಹೇಳಿದ್ದಾರೆ. ಆಗ ಈ ವಿಷಯ ಬೆಳಕಿಗೆ ಬಂದಿದೆ.