ಲಾಂಗ್ ಅಂದ ಕೂಡಲೇ ತಕ್ಷಣ ನೆನಪಾಗುವುದೇ ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್. ಶಿವಣ್ಣ ಏನಾದ್ರು ಕೈಯ್ಯಲ್ಲಿ ಲಾಂಗ್ ಹಿಡಿದು ನಡೆದರೆ ಅದರ ಖದರ್ ಬೇರೆ ಅಂತಾ ಅಭಿಮಾನಿಗಳು ಮಾತನಾಡಿಕೊಳ್ಳುತ್ತಿರುತ್ತಾರೆ. ಇದೀಗನಟ ಶಿವರಾಜಕುಮಾರ್ ಮತ್ತು ಕ್ರಿಕೆಟರ್ ಸುರೇಶ್ ರೈನಾ ಕಾರ್ಯಕ್ರಮವೊಂದರಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.
ಇದರಲ್ಲಿ ವಿಶೇಷ ಏನೆಂದರೆ. ‘ಓಂ’ ಸಿನಿಮಾ ರೀತಿಯಲ್ಲೇ ನಟ ಶಿವಣ್ಣ ಲಾಂಗ್ ಹಿಡಿಯುವುದು ಹೇಗೆ ಎಂಬುವುದನ್ನು ಬ್ಯಾಟ್ ಹಿಡಿದು ಸುರೇಶ್ ರೈನಾಗೆ ಹೇಳಿಕೊಟ್ಟಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲಾಗುತ್ತಿದೆ. ಅಭಿಮಾನಿಗಳು ಓಂ ಶಿವಣ್ಣ ಇಸ್ ಬ್ಯಾಕ್ ಎಂದೆಲ್ಲಾ ಕಮೆಂಟ್ ಮಾಡಿ ಸಂತಸ ವ್ಯಕ್ತಪಡಿಸುತ್ತಿದ್ದಾರೆ.