ಬುಲ್ಡೋಜರ್ ಕಾರ್ಯಾಚರಣೆ ಕುರಿತು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ಹೊರಡಿಸಿದೆ.
ಆಸ್ತಿಯ ಮಾಲೀಕರಿಗೆ 15 ದಿನಗಳ ಮುಂಚಿತವಾಗಿ ನೋಟಿಸ್ ನೀಡದೆ ನೆಲಸಮಗೊಳಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ. ರಾಜ್ಯಗಳಲ್ಲಿ ಕಾನೂನು ಸುವ್ಯವಸ್ಥೆ ಇರಬೇಕು. ಯಾರ ಆಸ್ತಿಯನ್ನೂ ಹೀಗೆ ತೆಗೆದುಕೊಳ್ಳುವಂತಿಲ್ಲ. ಯಾರಾದರೂ ತಪ್ಪಿತಸ್ಥರಾದರೂ ಕಾನೂನುಬದ್ಧವಾಗಿ ಮನೆ ಕೆಡವಬಹುದು. ಆರೋಪಿಯಾಗಿರುವುದು ಮತ್ತು ತಪ್ಪಿತಸ್ಥರಾಗಿರುವುದು ಮನೆ ಒಡೆಯಲು ಆಧಾರವಲ್ಲ ಎಂದು ಕೋರ್ಟ್ ಸೂಚಿಸಿದೆ.
ಬುಲ್ಡೋಜರ್‌ಗಳನ್ನು ನಿರಂಕುಶವಾಗಿ ಬಳಸಿದರೆ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಸುಪ್ರೀಂ ಕೋರ್ಟ್ ಖಡಕ್ ವಾರ್ನಿಂಗ್ ಮಾಡಿದೆ. ಅಲ್ಲದೇ, ಮನಬಂದಂತೆ ಮನೆ ಕೆಡವಿದರೆ ಪರಿಹಾರ ನೀಡಬೇಕಾಗುತ್ತದೆ ಎಂದು ಕೂಡ ಕೋರ್ಟ್ ಸೂಚಿಸಿದೆ.