ಬಾಹ್ಯಾಕಾಶ ನಿಲ್ದಾಣದಲ್ಲಿ ಸಿಲುಕಿರುವ ಗಗನಯಾತ್ರಿಗಳಾದ ಭಾರತೀಯ ಮೂಲದ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಮರಳಿ ಯಾವಾಗ ಬರುತ್ತಾರೆ ಎಂಬ ಕುರಿತು ನಾಸಾ ಮಹತ್ವದ ಅಪ್ಡೇಟ್ ನೀಡಿದೆ.
ಜೂನ್ 5 ರಂದು ಉಡಾವಣೆಯಾದ ಬೋಯಿಂಗ್ ನ ಸ್ಟಾರ್ ಲೈನರ್ ನ ಮೊದಲ ಮಾನವ ಸಹಿತ ಹಾರಾಟ ಇದಾಗಿತ್ತು. ಬಾಹ್ಯಾಕಾಶ ನೌಕೆಯಲ್ಲಿನ ಸಮಸ್ಯೆಗಳಿಂದಾಗಿ ಎಂಟು ದಿನಗಳವರೆಗೆ ನಿಗದಿಪಡಿಸಲಾದ ಸ್ಟಾರ್ ಲೈನರ್ ಮಿಷನ್ ಥ್ರಸ್ಟರ್ ವೈಫಲ್ಯಗಳು ಮತ್ತು ಹೀಲಿಯಂ ಸೋರಿಕೆ ಸೇರಿದಂತೆ ಬಾಹ್ಯಾಕಾಶ ನೌಕೆಯ ವಿವಿಧ ತಾಂತ್ರಿಕ ಸಮಸ್ಯೆಗಳಿಂದಾಗಿ ಅವರು ಅಲ್ಲಿಯೇ ಸಿಲುಕಿಕೊಳ್ಳುವಂತಾಗಿದೆ. ಹೀಗಾಗಿ ಅವರ ವಾಸ್ತವ್ಯವು ಸುಮಾರು 80 ದಿನಗಳವರೆಗೆ ವಿಸ್ತರಿಸಲ್ಪಟ್ಟಿದೆ. ಅಲ್ಲದೇ, ಸುರಕ್ಷಿತ ಮರಳುವಿಕೆಗಾಗಿ ನಾಸಾ ಈಗ ಎಲ್ಲ ರೀತಿಯ ಯತ್ನ ಮಾಡುತ್ತಿದೆ.
ಬೋಯಿಂಗ್‌ನ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಯಲ್ಲಿ ಪತ್ತೆಯಾದ ಸಮಸ್ಯೆಗಳ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿರುವಾಗ ನಾಸಾ ಗಗನಯಾತ್ರಿಗಳು ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅನಿಶ್ಚಿತ ಸ್ಥಿತಿಯಲ್ಲಿದ್ದಾರೆ ಎಂದು ತಿಳಿದು ಬಂದಿದೆ. ಬಾಹ್ಯಾಕಾಶ ನಿಲ್ದಾಣದಲ್ಲಿ ಎಂಟು ದಿನಗಳ ಮಿಷನ್ ಎರಡು ತಿಂಗಳವರೆಗೆ ವಿಸ್ತರಿಸಿದ್ದು, ಅವರ ಮರಳುವಿಕೆಯ ಕುರಿತು ನಾಸಾ ಮಾಹಿತಿ ನೀಡಿದೆ.
ಗಗನಯಾತ್ರಿಗಳನ್ನು ಬೋಯಿಂಗ್‌ನ ಸ್ಟಾರ್‌ಲೈನರ್‌ನಲ್ಲಿ ಮರಳಿ ತರಬೇಕೆ ಅಥವಾ ಸ್ಪೇಸ್‌ಎಕ್ಸ್‌ನ ಡ್ರಾಗನ್ ಕ್ಯಾಪ್ಸುಲ್‌ಗೆ ವರ್ಗಾಯಿಸಬೇಕೆ ಎಂಬುದನ್ನು ಬಾಹ್ಯಾಕಾಶ ಸಂಸ್ಥೆ ಪರಿಶೀಲಿಸುತ್ತಿದೆ. ಗಗನಯಾತ್ರಿಗಳ ವಾಪಸಾತಿಗಾಗಿ ಸ್ಟಾರ್‌ಲೈನರ್‌ನೊಂದಿಗೆ ಮುಂದುವರಿಯಬೇಕೆ ಅಥವಾ ಬ್ಯಾಕಪ್ ಯೋಜನೆಯಾಗಿ ಸ್ಪೇಸ್ ಎಕ್ಸ್ ನ ಕ್ರ್ಯೂ ಡ್ರ್ಯಾಗನ್ ಕ್ಯಾಪ್ಸುಲ್‌ಗೆ ಬದಲಾಯಿಸಬೇಕೆ ಎಂದು ಸಂಸ್ಥೆ ಯೋಚಿಸುತ್ತಿದೆ. ಒಂದು ವೇಳೆ ಇದು ಆಗದಿದ್ದರೆ, ಮರಳಿ ಬರುವ ಸಮಯ ಫೆಬ್ರವರಿ 2025ರವರೆಗೂ ಹೋಗಬಹುದು. ಆದರೆ ಅವರ ಆರೋಗ್ಯದ ಬಗ್ಗೆ ನಾಸಾ ಗಮನ ಹರಿಸಬೇಕಿದೆ.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸಹಾಯವನ್ನು ಪಡೆಯುವ ಸಾಧ್ಯತೆಯನ್ನು ನಾಸಾ ಪರಿಶೀಲಿಸುತ್ತಿದೆ.