ಅಲ್ಲು ಅರ್ಜುನ್ ನಟಿಸಿರುವ ಪುಷ್ಪ 2’ ಚಿತ್ರವು ಹಣದ ಹೊಳೆಯನ್ನೇ ಬಾಚಿಕೊಳ್ಳುತ್ತಿದೆ. ಈಗಾಗಲೇ ಈ ಚಿತ್ರ ಬಿಡುಗಡೆಯಾದ ದಿನದಿಂದಲೂ ವಿಶ್ವದ ಬಾಕ್ಸ್ ಆಫೀಸ್ ನಲ್ಲಿ ಭಾರೀ ಸದ್ದು ಮಾಡುತ್ತಿದೆ.
ಈ ಚಿತ್ರ ಕೇವಲ ದಕ್ಷಿಣದವರಿಗೆ ಮಾತ್ರವಲ್ಲ. ಉತ್ತರ ಭಾರತದವರಿಗೂ ಇಷ್ಟವಾಗುತ್ತಿದೆ. ಹೀಗಾಗಿ ಎಲ್ಲೆಡೆ ಉತ್ತಮ ಪ್ರದರ್ಶನ ಕಾಣುತ್ತಿದೆ. ಬಾಲಿವುಡ್ ಜನರು ಕೂಡ ಈ ಚಿತ್ರದ ಯಶಸ್ಸು ಕಂಡು ಅಚ್ಚರಿ ಪಡುವಂತಾಗಿದೆ.
ಈ ಚಿತ್ರವು ಬಿಡುಗಡೆಯ ದಿನ 175 ಕೋಟಿ ರೂ. ಬಾಚಿಕೊಂಡಿತ್ತು. ಆನಂತರ ಶುಕ್ರವಾರ (ಡಿಸೆಂಬರ್ 6) 93.8 ಕೋಟಿ ರೂ. ಶನಿವಾರ (ಡಿಸೆಂಬರ್ 7) 119 ಕೋಟಿ ರೂ., ಭಾನುವಾರ 141 ಕೋಟಿ ರೂ. ಗಳಿಸಿದೆ. ಈ ಮೂಲಕ ಪುಷ್ಪ 2 ಹಲವು ದಾಖಲೆಗಳನ್ನು ಮಾಡಿದೆ.
‘ಪುಷ್ಪ 2’ ಚಿತ್ರ ಹಿಂದಿಯಲ್ಲಿ ಸುಮಾರು 83 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಹಿಂದೆ ಜವಾನ್ ಸಿನಿಮಾ 80 ಕೋಟಿ ರೂಪಾಯಿ ಗಳಿಕೆ ಮಾಡಿ ಮೊದಲ ಭಾನುವಾರದ ಕಲೆಕ್ಷನ್ನಲ್ಲಿ ಅಗ್ರಸ್ಥಾನದಲ್ಲಿತ್ತು. ಈಗ ಹಿಂದಿ ವರ್ಷನ್ ನಲ್ಲೂ ದಕ್ಷಿಣ ಭಾರತದ ಚಿತ್ರ ಸದ್ದು ಮಾಡಿದೆ.