ಬೆಳಗಾವಿ: ಕಬ್ಬು ಬೆಳೆಗಾರರಿಗೆ ಪ್ರಸ್ತುತ ಹಂಗಾಮಿಗೆ ಪ್ರತಿ ಟನ್ಗೆ 3,500 ರೂಪಾಯಿ ದರ ನೀಡುವಂತೆ ಒತ್ತಾಯಿಸಿ ಸಕ್ಕರೆ ಕಾರ್ಖಾನೆ ಹಾಗೂ ಸರ್ಕಾರದ ವಿರುದ್ಧ ಮೂಡಲಗಿ ತಾಲೂಕಿನ ಗುರ್ಲಾಪುರದಲ್ಲಿ ನಡೆಯುತ್ತಿರುವ ಪ್ರತಿಭಟನೆ ಆರನೇ ದಿನಕ್ಕೆ ಕಾಲಿಟ್ಟಿದೆ.
ಇವತ್ತು ರೈತರ ಆಕ್ರೋಶದ ಕಟ್ಟೆ ಒಡೆದಿದ್ದು, ಪ್ರಮುಖ ರಸ್ತೆಗಳನ್ನು ತಡೆಗಟ್ಟಿ ಹೋರಾಟ ನಡೆಸಿದ್ದಾರೆ. ಪ್ರಮುಖವಾಗಿ ಅಥಣಿ- ಗೋಕಾಕ್, ಅಥಣಿ- ವಿಜಯಪುರ, ಚಿಕ್ಕೋಡಿ- ಮುಧೋಳ ರಾಜ್ಯ ಹೆದ್ದಾರಿ ಜೊತೆಗೆ ಅಥಣಿ ಹಾಗೂ ಹುಕ್ಕೇರಿ ಪಟ್ಟಣ ಸಂಪೂರ್ಣ ಬಂದ್ ಮಾಡಿ ವ್ಯಾಪಾರಸ್ಥರು ಸ್ವಯಂ ಪ್ರೇರಿತವಾಗಿ ರೈತ ಹೋರಾಟಕ್ಕೆ ಬೆಂಬಲ ನೀಡಿದ್ದಾರೆ.
ಕಬ್ಬಿನ ಬೆಲೆ ನಿಗದಿಗೆ ಆಗ್ರಹಿಸಿ ಸಾವಿರಾರು ರೈತರು ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ರೈತರ ಸಂಕಷ್ಟ ಆಲಿಸದ ಕಾಂಗ್ರೆಸ್ ಸರ್ಕಾರಕ್ಕೆ ನಾಡಿನ ರೈತರು ಮತ್ತು ಕಬ್ಬು ಬೆಳೆಗಾರರ ಬಗ್ಗೆ ಕಿಂಚಿತ್ತು ಕಾಳಜಿ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೋರಾಟಕ್ಕೆ ಕೈ ಜೋಡಿಸಿ ಕಿಡಿಕಾರಿದರು.
ಇದನ್ನೂ ಓದಿ : ವಿಜಯಪುರ | ಇಂದು ಮತ್ತೆ ಭೂಕಂಪನದ ಅನುಭವ ; 2 ತಿಂಗಳಿನಲ್ಲಿ 13 ಭಾರಿ ಕಂಪಿಸಿದ ಭೂಮಿ



















