ಬೆಂಗಳೂರು ಗ್ರಾಮಾಂತರ: ಏಕಾಏಕಿ ಎಲೆಕ್ಟ್ರಿಕ್ ಬೈಕ್ ಹೊತ್ತಿ ಉರಿದಿರುವ ಘಟನೆ ನಡೆದಿದೆ.
ದೊಡ್ಡಬಳ್ಳಾಪುರದ ಕೊಂಗಾಡಿಯಪ್ಪ ಕಾಲೇಜು ರಸ್ತೆಯಲ್ಲಿ ಈ ಘಟನೆ ನಡೆದಿದೆ. ಚಂದ್ರಶೇಖರ್ ಎಂಬುವವರಿಗೆ ಸೇರಿದ ಬೈಕ್ ಹೊತ್ತಿ ಉರಿದಿದೆ. ಬೈಕ್ ನ್ನು ಅಂಗಡಿಗೆ ಬಂದು ನಿಲ್ಲಿಸಿದ ಕೂಡಲೇ ಏಕಾಏಕಿ ಹೊತ್ತಿ ಉರಿದಿದೆ ಎನ್ನಲಾಗಿದೆ. ಚಂದ್ರಶೇಖರ್ ಪ್ರತಿದಿನ ಬರುವಂತೆ ಅಂಗಡಿಗೆ ಬಂದು ಅಂಗಡಿ ತೆರೆಯುತ್ತಿದ್ದಂತೆ ಬೈಕ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಬೆಂಕಿ ನಂದಿಸುವ ಕೆಲಸಕ್ಕೆ ಚಂದ್ರಶೇಖರ್ ಮುಂದಾಗಿದ್ದಾರೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ. ಬೈಕ್ ಹೊತ್ತಿ ಉರಿದಿದೆ. ಮಾಲೀಕ ಇತ್ತೀಚೆಗಷ್ಟೇ ಹೊಸ ಬ್ಯಾಟರಿ ಹಾಕಿಸಿದ್ದ ಎನ್ನಲಾಗಿದೆ.
ಆದರೆ, ಅದೃಷ್ಟವಶಾತ್ ಚಂದ್ರಶೇಖರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.