ಚಾಮರಾಜನಗರ : ಹನೂರು ತಾಲೂಕಿನ ವಿವಿಧ ಗ್ರಾಮದಲ್ಲಿ ಹಸುಗಳು ವಿಚಿತ್ರ ರೋಗಕ್ಕೆ ಬಲಿಯಾಗುತ್ತಿರುವುದು ಕಂಡು ಬಂದಿದೆ.
ಕೆಲ ದಿನಗಳಿಂದ ಇಲ್ಲಿಯವರೆಗೆ 15ಕ್ಕೂ ಅಧಿಕ ಹಸುಗಳ ಈ ವಿಚಿತ್ರ ರೋಗಕ್ಕೆ ಬಲಿಯಾಗಿವೆ ಎಂದು ಹೇಳಲಾಗುತ್ತಿದ್ದು, ಹಸುಗಳ ಹಠಾತ್ ಸಾವಿನಿಂದ ರೈತರು ಆತಂಕಕ್ಕೊಳಗಾಗಿದ್ದಾರೆ.
ಗ್ರಾಮದ ಪಾಷಾ ಎಂಬುವವರ ಹಸು ಕಟ್ಟಿ ಹಾಕಿದ ಸ್ಥಳದಲ್ಲೇ ಸಾವಾಗಿದೆ. ಅಲ್ಲದೇ ತಾಲೂಕಿನ ಪುದುರಾಮಾಪುರ, ನಾಗಣ್ಣನಗರ, ಅಂಬಿಕಾಪುರ ಮೇಡು ಸೇರಿದಂತೆ ವಿವಿಧ ಗ್ರಾಮದಲ್ಲಿ ಈ ವಿಚಿತ್ರ ಕಾಯಿಲೆಗೆ ಬಲಿಯಾಗುತ್ತಿರುವುದು ಕಂಡು ಬಂದಿದೆ. ಹಸುಗಳ ಸಾವಿಗೆ ಯಾವುದೇ ನಿಖರ ಕಾರಣ ತಿಳಿದು ಬಂದಿಲ್ಲ.















