ಬೆಂಗಳೂರು: ದೇವಸ್ಥಾನದ ವಿಗ್ರಹಗಳನ್ನ ಕಳ್ಳತನ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಅರೆಸ್ಟ್ ಮಾಡುವಲ್ಲಿ ಕಾಡುಗೋಡಿ ಪೊಲೀಸರು ಯಶಸ್ವಿಯಾಗಿದ್ದಾರೆ. ಮಹಮ್ಮದ್ ರಬ್ಬಿ, ಮಹಮ್ಮದ್ ಯೂಸುಫ್, ಮಹಮ್ಮದ್ ಬಾಬು ಬಂಧಿತ ಆರೋಪಿಗಳು.
ವೆಸ್ಟ್ ಬೆಂಗಾಲ್ ನಿಂದ ಬಂದಿದ್ದ ಇವರು ಕಾಡುಗೋಡಿಯ ಮುನೇಶ್ವರ, ಸಪ್ಲಮ್ಮ ವಿಗ್ರಹಗಳು, ಹೊಸಕೋಟೆಯ ಹುಲ್ಲೂರಿನ ಶ್ರೀರಾಮ ಲಕ್ಷ್ಮಣನ ವಿಗ್ರಹಗಳನ್ನು ಕಳ್ಳತನ ಮಾಡಿದ್ದರು ಎಂದು ಆರೋಪಿಸಲಾಗಿದೆ. ಅಲ್ಲದೇ ಪಾರ್ಟ್ ಟೈಮಾಗಿ ಗುಜುರಿ ಆಯುವ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಸದ್ಯ ಆರೋಪಿಗಳನ್ನು ಕಾಡುಗೋಡಿ ಪೊಲೀಸರು ಬಂಧಿಸಿದ್ದು, ಆರೋಪಿಗಳಿಂದ 60 ಲಕ್ಷ ಮೌಲ್ಯದ 22 ಪಂಚಲೋಹ ವಿಗ್ರಹ ವಶಕ್ಕೆ ಪಡೆದಿದ್ದಾರೆ. ಈಗಾಗಲೇ ಆರೋಪಿಗಳ ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ.