ಹೊಸದಿಲ್ಲಿ: ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ ಮತ್ತೊಂದು ಸ್ಪೋಟಕ ವಿಷಯ ಬಹಿರಂಗ ಪಡಿಸಿದ್ದಾರೆ. ಈ ಮೂಲಕ ಪ್ರಧಾನಿ ನರೇಂದ್ರ ಮೋದಿ ಹಾಗೂ ಶಾಗೆ ನೋಟಿಸ್ ನೀಡಿದ್ದಾರೆ.
ಈಗ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಮೋದಿ ಮತ್ತು ಶಾ ರಕ್ಷಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ರಾಹುಲ್ ಗಾಂಧಿ ಭಾರತದ ಪ್ರಜೆಯೇ ಅಲ್ಲ ಎಂದು ಸುಬ್ರಮಣಿಯನ್ ಸ್ವಾಮಿ ಅನೇಕ ವರ್ಷಗಳಿಂದ ಆರೋಪಿಸುತ್ತಿದ್ದಾರೆ. ರಾಹುಲ್ ಗಾಂಧಿ ಅವರು 2003ರಲ್ಲಿ ಬ್ರಿಟಿಷ್ ಪೌರತ್ವ ಪಡೆದಿದ್ದಾರೆ. ಅಲ್ಲದೆ, ಲಂಡನ್‌ನಲ್ಲಿ ಬ್ಯಾಕ್ ಆಪ್ಸ್ ಹೆಸರಿನ ಕಂಪೆನಿ ಸ್ಥಾಪಿಸಿದ್ದಾರೆ. ಹೀಗಾಗಿ ಅವರ ಭಾರತದ ಪೌರತ್ವ ಅಮಾನ್ಯವಾಗಿದೆ ಎಂದು ಸುಬ್ರಮಣಿಯನ್ ಸ್ವಾಮಿ ಮತ್ತೊಮ್ಮೆ ಆರೋಪಿಸಿದ್ದಾರೆ.
ಹೀಗಾದರೂ ಅವರನ್ನು ರಕ್ಷಿಸುತ್ತಿರುವುದೇಕೆ ಎಂದು ಪ್ರಶ್ನಿಸಿದ್ದಾರೆ. 2003ರಲ್ಲಿ ಬ್ರಿಟಿಷ್ ಪೌರತ್ವ ಪಡೆದ ವಿದೇಶಿ ಪ್ರಜೆಯಾಗಿರುವಾಗ ಮತ್ತು ಲಂಡನ್‌ನಲ್ಲಿ ಬ್ಯಾಕ್ ಆಪ್ಸ್ ಎಂಬ ಕಂಪೆನಿ ಆರಂಭಿಸಿರುವಾಗ ಅವರನ್ನು ಮೋದಿ ಮತ್ತು ಶಾ ರಕ್ಷಿಸುತ್ತಿರುವುದು ಏಕೆ? ಅವರ ಭಾರತೀಯ ಪೌರತ್ವ ಅಮಾನ್ಯವಾಗಿದೆ. ಮೋದಿ ಅವರು ರಕ್ಷಣೆ ಮುಂದುವರಿಸಿದರೆ ನಾನು ಅವರ ವಿರುದ್ಧ ಪ್ರಕರಣ ದಾಖಲಿಸುತ್ತೇನೆ” ಎಂದು ಟ್ವೀಟ್ ಮೂಲಕ ಎಚ್ಚರಿಕೆ ನೀಡಿದ್ದಾರೆ.