ಶಿವಮೊಗ್ಗ: ರಾಜ್ಯದಲ್ಲಿ ಮಕ್ಕಳು ಹಾಗೂ ಯುವಕರಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ವಿಭಿನ್ನವಾಗಿ ಅರಿವು ಮೂಡಿಸಲಾಯಿತು.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ವಿಭಿನ್ನ ರೀತಿಯಲ್ಲಿ ಅರಿವು ಮೂಡಿಸಲಾಯಿತು. ಶಿಕ್ಷಕರು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರು. ತೀರ್ಥಹಳ್ಳಿಯ ಹೊನ್ನೇತಾಳು ಶಾಲಾ ವಿದ್ಯಾರ್ಥಿಗಳಿಂದ ಪ್ರತಿಜ್ಞೆ ಮಾಡಿಸಿದರು. ಇನ್ನು ಮುಂದೆ ಮೊಬೈಲ್ ನೋಡುವುದಿಲ್ಲ. ಬಳಕೆ ಮಾಡುವುದಿಲ್ಲ ಎಂದು ಶಪಥ ಮಾಡಿಸಲಾಯಿತು. ಇತ್ತೀಚೆಗೆ ಅತೀ ಹೆಚ್ಚು ಹೃದಯಾಘಾತ ಆಗುತ್ತಿರುವುದರಿಂದ ಶಪಥ ಮಾಡಿಸಲಾಯಿತು.



















