ವಿದ್ಯಾರ್ಥಿಗಳು ಯೂಟ್ಯೂಬ್ ನೋಡಿ ಬಾಂಬ್ ತಯಾರಿಸುವುದನ್ನು ಕಲಿತು ಶಿಕ್ಷಕಿಯ ಕುರ್ಚಿಯ ಕೆಳಗೆ ಇಟ್ಟಿರುವ ಘಟನೆ ನಡೆದಿದೆ.
ಹರಿಯಾಣ ಜಿಲ್ಲೆಯ ಭಿವಾನಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಈ ಘಟನೆಗೆ ಸಂಬಂಧಿಸಿದಂತೆ ಶಾಲೆಯ 13 ವಿದ್ಯಾರ್ಥಿಗಳನ್ನು ಅಮಾನತು ಮಾಡಲಾಗಿದೆ. ಶಿಕ್ಷಕರು ಯಾವುದೋ ಕಾರಣಕ್ಕೆ ವಿದ್ಯಾರ್ಥಿಗೆ ಬೈದಿದ್ದಾರೆ. ಇದರಿಂದ ಕೋಪಗೊಂಡು ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ.
ಕುರ್ಚಿಯ ಕೆಳಗೆ ಬಾಂಬ್ ಇರಿಸಿ ರಿಮೋಟ್ ಮೂಲಕ ಅದನ್ನು ಸಿಡಿಸಿದ್ದಾರೆ. ಆ ಸ್ಫೋಟವು ಕುರ್ಚಿಯಡಿ ದೊಡ್ಡ ರಂಧ್ರ ಸೃಷ್ಟಿಸಿದೆ. ಆದರೆ, ಅದೃಷ್ಟವಶಾತ್ ಶಿಕ್ಷಕರಿಗೆ ಯಾವುದೇ ರೀತಿಯ ಗಾಯಗಳಾಗಿಲ್ಲ. ಓರ್ವ ಕುರ್ಚಿಯಡಿ ಬಾಂಬ್ ಇಟ್ಟಿದ್ದರೆ ಇನ್ನೊಬ್ಬ ರಿಮೋಟ್ನಿಂದ ಬಟನ್ ಒತ್ತಿದ್ದಾನೆ. ಮಕ್ಕಳ ಈ ಕೃತ್ಯಕ್ಕೆ ಪಾಲಕರು ಕ್ಷಮೆ ಯಾಚಿಸಿದ್ದಾರೆ. ಇನ್ನು ಮುಂದೆ ಮಕ್ಕಳು ಈ ತಪ್ಪು ಮಾಡುವುದಿಲ್ಲ ಎಂದು ಪಾಲಕರು ಮನವಿ ಮಾಡಿದ್ದಾರೆ. ಹೀಗಾಗಿ ಮಕ್ಕಳನ್ನು ಒಂದು ವಾರ ಅಮಾನತು ಮಾಡಿ ಜಿಲ್ಲಾ ಶಿಕ್ಷಣಾಧಿಕಾರಿ ನರೇಶ್ ಮೆಹ್ತಾ ಆದೇಶ ಹೊರಡಿಸಿದ್ದಾರೆ.