ಉತ್ತರಾಖಂಡ : ರಾಜ್ಯದ ಹರಿದ್ವಾರ ಜಿಲ್ಲೆಯ ರೂರ್ಕಿಯಲ್ಲಿ ಶಿಕ್ಷಕರು ಮತ್ತು ಶಾಲಾ ಸಿಬ್ಬಂದಿಯ ನಿರ್ಲಕ್ಷ್ಯದಿಂದಾಗಿ ವಿದ್ಯಾರ್ಥಿ ಒಬ್ಬನು ಎರಡು ಗಂಟೆಯವರೆಗೆ ಶಾಲೆಯ ಕೊಠಡಿಯಲ್ಲೇ ಬಂಧಿತನಾಗಿದ್ದನು.
ತರಗತಿಗಳು ಮುಗಿದ ನಂತರ ಕೊಠಡಿಗಳಿಗೆ ಬೀಗ ಹಾಕಿ ಶಿಕ್ಷಕರು ಹೊರಟು ಹೋಗಿದ್ದಾರೆ. ಇದಾದ ಸ್ವಲ್ಪ ಸಮಯದ ನಂತರ ಹತ್ತಿರದ ವ್ಯಾಪಾರಿಗಳಿಗೆ ಒಳಗಿನಿಂದ ವಿದ್ಯಾರ್ಥಿಯೊಬ್ಬ ಅಳುತ್ತಿರುವ ಧ್ವನಿ ಕೇಳಿಸಿದೆ. ಆಗ ಅವರು ಶಾಲೆಗೆ ಧಾವಿಸಿ ಪರಿಶೀಲಿಸಿದ್ದಾರೆ. ನಂತರ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಸಾರ್ವಜನಿಕರ ಸಹಾಯದಿಂದ ಬೀಗ ಮುರಿದು ವಿದ್ಯಾರ್ಥಿಯನ್ನು ರಕ್ಷಿಸಿದರು.
ಈ ಶಾಲೆ ಗಂಗಾ ಕಾಲುವೆ ಪೊಲೀಸ್ ಠಾಣಾ ಪ್ರದೇಶದ ಅಂಬರ್ ತಲಾಬ್ ಪಕ್ಕದಲ್ಲಿದೆ. ಈ ಶಾಲೆಯಲ್ಲಿ ಶಿಕ್ಷಕರ ನಿರ್ಲಕ್ಷ್ಯ ವಹಿಸಿದ್ದಾರೆ. ಶಾಲಾ ಸಮಯದಲ್ಲಿ ಒಬ್ಬ ವಿದ್ಯಾರ್ಥಿ ತರಗತಿಯಲ್ಲಿ ನಿದ್ರೆಗೆ ಜಾರಿದ್ದ. ಆದರೆ, ಇದನ್ನು ಶಿಕ್ಷಕರು ಗಮನಿಸಿಲ್ಲ. ತರಗತಿಗಳನ್ನು ಮುಗಿಸಿದ ನಂತರ ಶಿಕ್ಷಕರು ಶಾಲೆಗೆ ಬೀಗ ಹಾಕಿ ಮನೆಗೆ ಹೋಗಿದ್ದಾರೆ.
ಇದನ್ನೂ ಓದಿ : SJ-100 ಪ್ಯಾಸೆಂಜರ್ ವಿಮಾನ ತಯಾರಿಕೆ : ರಷ್ಯನ್ ಕಂಪನಿ ಜೊತೆ ಎಚ್ಎಎಲ್ ಒಪ್ಪಂದ


















