ದಾವಣಗೆರೆ: ಚಿಕ್ಕ ವಯಸ್ಸಿನಲ್ಲೇ ಮಹಾಮಾರಿ ಕ್ಯಾನ್ಸರ್ ಗೆ ತುತ್ತಾಗಿದ್ದ ಬಾಲಕಿ, ಈಗ ಎಸ್ಸೆಸ್ಸೆಲ್ಸಿ ಟಾಪರ್ ಆಗಿದ್ದಾಳೆ.
ಕ್ಯಾನ್ಸರ್ (Cancer) ಕಾರಣಕ್ಕೆ ಒಂದು ವರ್ಷ ಶಾಲೆಗೂ ಬಾಲಕಿ ಗೈರಾಗಿದ್ದಳು. ಆದರೂ ಛಲ ಬಿಡದೆ, ಆತ್ಮವಿಶ್ವಾಸದಿಂದ ಕ್ಯಾನ್ಸರ್ ನೋವಿನಲ್ಲೂ ಬಾಲಕಿ ಓದಿಕೊಂಡು ಧೈರ್ಯದಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದು ಟಾಪರ್ ಆಗಿದ್ದಾಳೆ. ಸದ್ಯ ಆ ಬಾಲಕಿ ಈಗ ಶೇ. 93.44 ಅಂಕ ಗಳಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರಳಾಗಿದ್ದಾಳೆ.
ದಾವಣಗೆರೆ ನಗರದ ನಿಟ್ಟುವಳ್ಳಿಯ ಪಿಎಂ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಬಿ. ಶಾಂತಾ ಈ ಸಾಧನೆ ಮಾಡಿದ ಬಾಲಕಿ. ದಾವಣಗೆರೆ ನಗರದನಿಟ್ಟುವಳ್ಳಿ ಬಸವರಾಜಪ್ಪ ಮತ್ತು ಆಶಾ ದಂಪತಿಯ ಮೊದಲ ಪುತ್ರಿ ಬಿ. ಶಾಂತಾ ಚಿಕ್ಕ ವಯಸ್ಸಿನಿಂದಲೇ ಕ್ಯಾನ್ಸರ್ ಗೆ ತುತ್ತಾಗಿದ್ದರು. ಸದ್ಯ ಶಾಂತಾ ಸಾಧನೆಗೆ ಶಿಕ್ಷಕರು, ಪೋಷಕರು ಹಾಗೂ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.