ಮಂಗಳೂರು : ರಾಜ್ಯದಾದ್ಯಂತ ಮತ್ತೊಂದು ಹೃದಯಾಘಾತ ಸಂಭವಿಸಿದೆ.
ಮಂಗಳೂರಿನಲ್ಲಿ ಹೃದಯಾಘಾತಕ್ಕೆ ಇಂಜಿನಿಯರಿಂಗ್ ವಿದ್ಯಾರ್ಥಿ ಬಲಿಯಾಗಿದ್ದಾನೆಂದು ತಿಳಿದು ಬಂದಿದೆ. ಮಂಗಳೂರು ಹೊರವಲಯ ಸುರತ್ಕಲ್ ಕೃಷ್ಣಾಪುರದ ವಿದ್ಯಾರ್ಥಿ ಅಫ್ತಾಬ್ (18) ಹೃದಯಾಘಾತದಿಂದ ಸಾವನ್ನಪ್ಪಿದ ಇಂಜಿನಿಯರಿಂಗ್ ವಿದ್ಯಾರ್ಥಿ ಎಂದು ತಿಳಿದು ಬಂದಿದೆ. ಮನೆಯಲ್ಲಿ ಸ್ನಾನಕ್ಕೆಂದು ಹೋಗುತ್ತಿದ್ದ ವೇಳೆ ಹೃದಯಾಘಾತಕ್ಕೊಳಗಾಗಿ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.
ಸುರತ್ಕಲ್ ಖಾಸಗಿ ಕಾಲೇಜೊಂದರಲ್ಲಿ ಇಲೆಕ್ಟ್ರಿಕಲ್ ಇಂಜಿನಿಯರಿಂಗ್ ಡಿಪ್ಲೋಮಾ ವಿದ್ಯಾರ್ಥಿಯಾಗಿ ಅಫ್ತಾಬ್ ವ್ಯಾಸಂಗ ಮಾಡುತ್ತಿದ್ದರು.



















