ಬೆಂಗಳೂರು: ಗಣೇಶ ಹಬ್ಬಕ್ಕೆ ಬಿಬಿಎಂಪಿಯಿಂದ ಹೊಸ ರೂಲ್ಸ್ ಬಿಡುಗಡೆಯಾಗಿದ್ದು, ನಿಯಮ ಮೀರಿದರೆ ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ. ಎಂದಿನಂತೆ ಈ ವರ್ಷವೂ ಪಿಓಪಿ ಗಣೇಶ ಬಳಕೆಯನ್ನು ನಿಷೇಧಿಸಲಾಗಿದೆ.
ಗಣೇಶ ಮೂರ್ತಿ ನಿರ್ಮಾಣಮಾಡುವವರಿಗೆ ಪಾಲಿಕೆ ಖಡಕ್ ಎಚ್ಚರಿಕೆ ಕೊಟ್ಟಿದೆ. ಇನ್ಮುಂದೆ ಕಾರಣ ಹೇಳಿದರೆ ಕೇಳುವುದಿಲ್ಲ ಎಂದು ಬಿಬಿಎಂಪಿ ಎಚ್ಚರಿಕೆ ನೀಡಿದೆ. ಆಗಸ್ಟ್ 27ರಂದು ದೇಶದಾದ್ಯಂತ ಗಣೇಶ ಹಬ್ಬ ಆಚರಿಸಲಾಗುತ್ತದೆ.
ಈಗಾಗಲೇ ರಾಜ್ಯ ಸರ್ಕಾರ ಪಿಓಪಿ ಗಣೇಶ ಬಳಕೆಯನ್ನು ನಿಷೇಧಿಸಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಈ ವರ್ಷದಿಂದ ಪಿಓಪಿ ಗಣೇಶ ಮೂರ್ತಿ ಮಾರುವಂತಿಲ್ಲ. ನಿಯಮ ಮೀರಿ ಮಾರಾಟ ಮಾಡಿದರೆ ಶಿಕ್ಷೆಯ ಜತೆಗೆ ದಂಡವನ್ನೂ ವಿಧಿಸಲಾಗುತ್ತದೆ. ಪಿಓಪಿ ಬದಲು ಮಣ್ಣಿನ ಗಣಪ ಬಳಸುವಂತೆ ಸಲಹೆ ನೀಡಲಾಗಿದೆ. ಪಿಓಪಿಯಿಂದ ಪರಿಸರ, ಕೆರೆ ಮಲಿನವಾಗುತ್ತದೆ. ಕಾನೂನಿನ ಪ್ರಕಾರ ಶಿಕ್ಷೆ ವಿಧಿಸಲಾಗುವುದು ಎಂದು ಬಿಬಿಎಂಪಿ ಹೇಳಿದೆ.
ಈ ಬಾರಿಯೂ ಪರಿಸರ ಸ್ನೇಹಿ, ಮಣ್ಣಿನ ಗಣೇಶ ತಯಾರಿಸುವಂತೆ ಸೂಚಿಸಲಾಗಿದೆ. ನಿಯಮ ಮೀರಿ ಪಿಓಪಿ ಗಣೇಶ ಮಾರಾಟ ಮಾಡುವುದನ್ನು ಹಾಗೂ ತಾಯಾರಿಸುವುದನ್ನು ನಿಷೇಧಿಸಲಾಗಿದೆ. ಬಿಬಿಎಂಪಿ ವಿಶೇಷ ಆಯುಕ್ತ ವಿಕಾಸ್ ಕಿಶೋರ್ ಸುರಲ್ಕರ್ ಹೇಳಿದ್ದಾರೆ.
ಪಿಓಪಿ ಗಣಪನಿಂದ ಏನಾಗುತ್ತೆ?
- ಪರಿಸರಕ್ಕೆ ಹಾನಿ
- ನೀರಿನಲ್ಲಿ ಕರಗುವುದಿಲ್ಲ
- ಕೆರೆಗಳು ಮಲೀನವಾಗಲಿವೆ
- ಮೂರ್ತಿಗಳು ವಿರೂಪವಾಗ್ತವೆ



















