ಬೀದರ್: ಧರ್ಮಸ್ಥಳದಲ್ಲಿ ನೂರಾರು ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದೆ. ತನಿಖಾ ವರದಿ ಆಧರಿಸಿ ಮುಂದಿನ ಕ್ರಮ ಕೈಕೊಳ್ಳುತ್ತೇವೆ. ಅರಣ್ಯ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯತನ, ಬೇಜವಾಬ್ದಾರಿತನ ತೋರಿಸಿದರೆ ಕಾನೂನು ಪ್ರಕಾರ ಶಿಸ್ತು ಕ್ರಮ ಜರುಗಿಸುತ್ತೇವೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.
ಧರ್ಮಸ್ಥಳದಲ್ಲಿ ನೂರಾರು ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮೀಸಲು ಅರಣ್ಯ ಪ್ರದೇಶದಲ್ಲಿ ಅಸ್ಥಿಪಂಜರ ಪತ್ತೆ ವಿಚಾರವಾಗಿ ಬೀದರ್ ನಲ್ಲಿ ಮಾತನಾಡಿದ ಅವರು, ಈ ಕುರಿತು ತನಿಖಾ ವರದಿ ಕೈ ಸೇರಲಿ. ಎಲ್ಲಿ ಅಕ್ರಮ ಆಗಿದೆ? ಯಾವ ಅರಣ್ಯ ಪ್ರದೇಶ? ಯಾವ ಸರ್ವೇ ನಂಬರ್? ಯಾರ ವ್ಯಾಪ್ತಿ ಬರುತ್ತೆ? ಯಾವತ್ತು ಆಗಿದೆ? ಯಾರು ಜವಾಬ್ದಾರರಿದ್ದಾರೆ? ಅದೆಲ್ಲವೂ ತನಿಖೆಯಲ್ಲಿ ಬರುತ್ತದೆ.
ತನಿಖಾ ವರದಿ ಬಂದ ಮೇಲೆ ಅಕ್ರಮವಾಗಿ ಆಗಿದ್ದರೆ ಖಂಡಿತವಾಗಿಯೂ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದರು.