ಬೆಳಗಾವಿ: ರಸ್ತೆಯಲ್ಲಿ ಆಟವಾಡುತ್ತಿದ್ದ ಮಕ್ಕಳ ಮೇಲೆ ನಾಯಿ ದಾಳಿ ನಡೆಸಿದ್ದು, ಮಗು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ಪಟ್ಟಣದ ನ್ಯೂ ಗಾಂಧಿನಗರ ಮತ್ತು ಉಜ್ವಲ‌್ ನಗರದಲ್ಲಿ ಈ ಘಟನೆ ನಡೆದಿದೆ. ನಾಲ್ಕು ವರ್ಷದ ಮೊಹಮ್ಮದ್ ಖೈಫ್ ಹಾಗೂ ಹೈಜಲ್ ಎಂಬುವವರ ಮೇಲೆ ಏಕಾಏಕಿ ಬೀದಿ ನಾಯಿಗಳ (stray dogs) ಗ್ಯಾಂಗ್ ದಾಳಿ ಮಾಡಿದೆ. ಕೂಡಲೇ ಸ್ಥಳೀಯರು ಮಕ್ಕಳನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇಬ್ಬರು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದು, ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಾಯಿಗಳ ಅಟ್ಟಹಾಸಕ್ಕೆ ಪೋಷಕರು ಹಾಗೂ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಉಜ್ವಲ ನಗರ ಹಾಗೂ ನ್ಯೂ ಗಾಂಧಿನಗರದ ಜನರಿಗೆ ಹಗಲು ರಾತ್ರಿ ಈ ಬೀದಿ ನಾಯಿಗಳನ್ನು ಕಾಯೋದೆ ಒಂದು ದೊಡ್ಡ ಕೆಲಸವಾಗಿದೆ. ಬೇಸಿಗೆ ರಜೆ ಹಿನ್ನಲೆ ಮಕ್ಕಳು ಬೀದಿಯಲ್ಲಿ ಆಟ ಆಡುತ್ತಿದ್ದಾರೆ. ಪಾಲಿಕೆಯವರು ಬೀದಿನಾಯಿಗಳ ಅಟ್ಟಹಾಸ ದಮನ ಮಾಡುತ್ತಿಲ್ಲ.
ಕೆಲ ದಿನಗಳ ಹಿಂದಷ್ಟೆ ಮಹಾನಗರ ಪಾಲಿಕೆ ಅಧಿಕಾರಿಗಳ ಗಮನಕ್ಕೆ ನಾಯಿಗಳಿಂದ ಆಗುತ್ತಿರುವ ತೊಂದರೆಯ ಬಗ್ಗೆ ಗಮನಕ್ಕೆ ತಂದರೂ ಸಹ ಅಧಿಕಾರಿಗಳು ಕ್ಯಾರೆ ಅಂದಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.