ಬೆಳಗಾವಿ: ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಖಣದಾಳ ಗ್ರಾಮದಲ್ಲಿ ನಡೆದ ಜಾತ್ರೆ ಸಂದರ್ಭ ಅಚ್ಚರಿಯ ಘಟನೆಯೊಂದು ಬೆಳಕಿಗೆ ಬಂದಿದ್ದು, ಖಣದಾಳ ಗ್ರಾಮದ ಹುಲಿಕಾಂತೇಶ್ವರ ದೇವರ ಹುಂಡಿ ಎಣಿಕೆ ವೇಳೆ ವಿಚಿತ್ರ ಹರಕೆ ಚೀಟಿ ಪತ್ತೆಯಾಗಿದೆ.

ದೇವರ ಹುಂಡಿಯಲ್ಲಿ ಹಾಕಿದ್ದ 100 ರೂ ಹಾಗೂ 10 ರೂ ಮುಖಬೆಲೆಯ ನೋಟಿನೊಳಗೆ ಬಿಳಿ ಹಾಳೆಯಲ್ಲಿ ದೇವರೇ ನನ್ನ ಕಷ್ಟ ದೂರ ಮಾಡು, ಮುಂದಿನ ಜಾತ್ರೆಯೊಳಗೆ ನಮ್ಮ ಅತ್ತೆ ಸಾಯಲಿ ಎಂದು ಪ್ರಾರ್ಥನೆ ಮಾಡಿರುವುದು ತಿಳಿದುಬಂದಿದೆ.
ಜಾತ್ರೆ ನಿಮಿತ್ತ ದೇವರ ಹುಂಡಿ ಎಣಿಕೆ ನಡೆಯುತ್ತಿದ್ದ ವೇಳೆ ಈ ಚೀಟಿ ಪತ್ತೆಯಾಗಿದ್ದು, ಸ್ಥಳೀಯರಲ್ಲಿ ಆಶ್ಚರ್ಯ ಹಾಗೂ ಚರ್ಚೆಗೆ ಕಾರಣವಾಗಿದೆ. ಈ ವಿಚಿತ್ರ ಹರಕೆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿಯೂ ವೈರಲ್ ಆಗುತ್ತಿದೆ.



















