ಮಂಡ್ಯ : ಮಂಡ್ಯದ ಮದ್ದೂರಿನ ಗಣೇಶ ವಿಸರ್ಜನೆ ಮೆರವಣಿಗೆ ಮೇಲೆ ಅನ್ಯಕೋಮಿನವರಿಂದ ಕಲ್ಲು ತೂರಾಟ ಮಾಡಿರುವ ಪ್ರಕರಣ ಮದ್ದೂರು ತಾಲೂಕಿನಾದ್ಯಂತ ಶಾಂತಿ ಕದಡಿತ್ತು. ಮದ್ದೂರಿನ ಸ್ಥಿತಿ ಉದ್ವಿಗ್ನಕ್ಕೆ ತಿರುಗಿದೆ. ನಿನ್ನೆ(ಸೋಮವಾರ, ಸೆ.8) ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ರಸ್ತೆಗಿಳಿದು ಘಟನೆಯನ್ನು ಖಂಡಿಸಿ ಪ್ರತಿಭಟನೆ ನಡೆಸಿದ್ದರು. ಇಂದು ಕೂಡ ಪ್ರತಿಭಟನಾ ಜಾಥಾ ನಡೆಯಲಿರುವ ಹಿನ್ನೆಲೆ ಮದ್ದೂರು ಬಂದ್ಗೆ ಕರೆ ನೀಡಲಾಗಿದೆ.
ಗಣೇಶ ವಿಸರ್ಜನಾ ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆದ ಘಟನೆಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ರಾಜಕೀಯವಾಗಿ ಈ ಪ್ರಕರಣ ತಿರುವುದು ಪಡೆದುಕೊಂಡಿದ್ದು, ಆಡಳಿತ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಹಾಗೂ ಜೆಡಿಎಸ್ ಸೇರಿ ಹಿಂದೂ ಪರ ಸಂಘಟನೆಗಳು ಆಕ್ರೋಶ ಹೊರ ಹಾಕಿದ್ದಾರೆ. ಮದ್ದೂರು ತಾಲೂಕಿನ ರಹೀಂ ನಗರದಲ್ಲಿ ಮೆರವಣಿಗೆ ಸಾಗುವ ವೇಳೆ ಮಸೀದಿಯಿಂದಲೇ ಕಲ್ಲು ತೂರಾಟ ನಡೆದಿದೆ ಎನ್ನುವ ಆರೋಪ ಕೇಳಿ ಬಂದಿದೆ.
ಇಂದು ಕೂಡ ಮದ್ದೂರು ಬಂದ್
ಹಿಂದೂಪರ ಸಂಘಟನೆಗಳು ಇಂದು ಕೂಡ ಮದ್ದೂರು ಬಂದ್ಗೆ ಕರೆ ನೀಡಿದೆ. ಹಿಂದುಪರ ಸಂಘಟನೆಗಳ ಪ್ರತಿಭಟನೆಗೆ ಬಿಜೆಪಿ ಸಾಥ್ ನೀಡಿದೆ. ಮದ್ದೂರಿನ ಕೆಎಂ ದೊಡ್ಡಿ, ಬೆಸಗರಹಳ್ಳಿ, ಕೆಸ್ತೂರು ಸೇರಿದಂತೆ ಹೋಬಳಿ ಕೇಂದ್ರಗಳು ಸಹ ಬಂದ್ ಆಗಿದೆ.



















