ಸಿಎಂ ಬದಲಾವಣೆ ಕೂಗಿಗೆ ಬ್ರೇಕ್ ಹಾಕಲು ಹೈಕಮಾಂಡ್ ಪ್ಲಾನ್ ಮಾಡಿದೆ. ಶೀಘ್ರದಲ್ಲೇ ಬಿಹಾರದಲ್ಲಿ ವಿಧಾನಸಭೆ ಚುನಾವಣೆಗಳು ನಡೆಯಲಿವೆ. ಈ ವೇಳೆ ಅಹಿಂದ ಮತಗಳ ಮೇಲೆ ಕಣ್ಣಿಟ್ಟಿರುವ ಇಂಡಿ ಮೈತ್ರಿಕೂಟ ಗೆಲುವಿನ ಲೆಕ್ಕಾಚಾರ ರೂಪಿಸಿದೆ. ಈ ನಿಟ್ಟಿನಲ್ಲೇ ಒಬಿಸಿ ಸಲಹಾ ಸಮಿತಿಯನ್ನು ಪುನಾರಚಿಸಲಾಗಿದ್ದು, ಸಿದ್ದರಾಮಯ್ಯರಿಗೂ ಅವಕಾಶ ನೀಡಲಾಗಿದೆ.
ಇಂಥಾ ಸಂದರ್ಭದಲ್ಲಿ ಕರ್ನಾಟಕದಲ್ಲಿ ಅಹಿಂದ ಮುಖಂಡರೊಬ್ಬರನ್ನು ಸಿಎಂ ಕುರ್ಚಿಯಿಂದ ಕೆಳಗಿಳಿಸುವ ಅಪಾಯವನ್ನು ವರಿಷ್ಠರು ಮೈಮೇಲೆ ಎಳೆದುಕೊಳ್ಳಲು ಸಿದ್ಧರಿಲ್ಲ. ಕಾಂಗ್ರೆಸ್ ಪಕ್ಷ ಅಹಿಂದ ಪರ ಅಂತಲೇ ಬಿಂಬಿಸಿ ರಾಹುಲ್ ಗಾಂಧಿ ಈಗಾಗಲೇ ಬಿಹಾರದಲ್ಲಿ ಪ್ರಚಾರ ನಡೆಸಿದ್ದಾರೆ. ಹೀಗಾಗಿ ಹೊಂದಾಣಿಕೆ ಮಾಡಿಕೊಂದು ಮುನ್ನಡೆಯುವಂತೆ ಸಿದ್ದರಾಮಯ್ಯ-ಡಿಕೆಶಿಗೆ ಸೂಚನೆ ನೀಡುವ ಸಾಧ್ಯತೆಗಳಿವೆ.
ವಿನಾಕಾರಣ, ಬಹಿರಂಗ ಹೇಳಿಕೆಗಳನ್ನು ನಿಲ್ಲಿಸಿ, ಬದಲಾವಣೆ ಬೆಂಕಿಯನ್ನು ನಂದಿಸಲು ಹೈಕಮಾಂಡ್ ಪ್ಲ್ಯಾನ್ ಮಾಡಿದೆ. ಈ ಬಗ್ಗೆ ಇಂದು ಉಭಯ ನಾಯಕರೊಟ್ಟಿಗೆ ಚರ್ಚಿಸಲಿರುವ ರಾಹುಲ್ ಗಾಂಧಿ ಬಿಹಾರ ಚುನಾವಣೆ ಮುಗಿಯೋವರೆಗೂ ಎಲ್ಲವನ್ನೂ ಸುಸೂತ್ರವಾಗಿ ನಡೆಸಿಕೊಂಡು ಹೋಗುವಂತೆ ಸೂಚಿಸುವ ಸಾಧ್ಯತೆಗಳಿವೆ. ಅಷ್ಟೇ ಅಲ್ಲಾ ಈ ಚುನಾವಣೆ ಬಳಿಕ ನಿಮ್ಮ ಬೇಡಿಕೆಯನ್ನು ಮತ್ತೊಮ್ಮೆ ಪರಿಶೀಲಿಸೋಣ, ನಿಮ್ಮ ಬೆಂಬಲಿಗರ ಬಾಯಿಗೆ ಬೀಗ ಹಾಕುವಂತೆಯೂ ಕಟ್ಟಪ್ಪಣೆ ಮಾಡುವ ಸಾಧ್ಯತೆಗಳಿವೆ.



















