ಇಂದು ರಾಜ್ಯದ್ಯಂತ ಲಾರಿ ಮುಷ್ಕರ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಅತ್ತಿಬೆಲೆ ಆರ್ ಟಿಓ ಚೆಕ್ ಪೋಸ್ಟ್ ಗೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಆರೋಗ್ಯ ತಪಾಸಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ.
ಬೆಂಗಳೂರು ನಗರ ಸಾರಿಗೆ ಜಂಟಿ ಆಯುಕ್ತೆ ಶೋಭಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಆರೋಗ್ಯ ತಪಾಸಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಿಪಿ, ಕಣ್ಣಿನ ತಪಾಸಣೆಯನ್ನು ಸ್ವತಃ ಆಯುಕ್ತೆ ಮಾಡಿಸಿಕೊಂಡರು. ವಾಹನ ಚಾಲಕರಿಗೆ ನಿತ್ಯ ಉಚಿತ ಆರೋಗ್ಯ ತಪಾಸಣಎ ಆಯೋಜಿಸಲಾಗಿತ್ತು. ಹೀಗಾಗಿ ಸ್ವತಃ ಆಯುಕ್ತರು ಕೂಡ ಉಚಿತ ಆರೋಗ್ಯ ತಪಾಸಣೆಯ ಲಾಭ ಮಾಡಿಕೊಂಡರು.
ಆನಂತರ ಆರ್ ಟಿಓ ಚೆಕ್ ಪೋಸ್ಟ್ ಕಚೇರಿ ಪರಿಶೀಲನೆ ನಡೆಸಿದರು. ಲಾರಿ ಮಾಲೀಕರ ಅಸೋಸಿಯೇಷನ್ ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.