ಚಿಕ್ಕೋಡಿ: RSS ಬ್ಯಾನ್ ಮಾಡುವುದಾಗಿ ಸಚಿವ ಪ್ರಿಯಾಂಕ ಖರ್ಗೆ ಹೇಳಿಕೆಗೆ ಬೆಂಗಳೂರಿನಲ್ಲಿ ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆರೆಸ್ಸೆಸ್ ಗೆ 100 ವರ್ಷಗಳ ಇತಿಹಾಸ ಇದೆ. ಈಗಲೂ ಬೆಳೆಯುತ್ತಲೇ ಇದೆ. ಇವತ್ತಿಗೂ ಜೀವಂತ ಇದೆ. RSS ಸಂಸ್ಥೆ ಅಲ್ಲಾ ಅದೊಂದು ಸಿದ್ದಾಂತ. ದೇಶ, ಧರ್ಮ ಸಂಸ್ಕೃತಿ ಬೆಳೆಸುವ ವಿಚಾರಧಾರೆ ಹೊಂದಿದೆ. ಇದರ ಬಗ್ಗೆ ಹೊರಗಡೆಯಿಂದ ಮಾತನಾಡುವ ಬದಲು ಒಳಗಡೆ ಬಂದು ಮಾತನಾಡಿ. ಅದರ ಬಗ್ಗೆ ಅಧ್ಯಯನ ಮಾಡಿ ಬಳಿಕ ಮಾತನಾಡಿ ಎಂದು ಗುಡುಗಿದ್ದಾರೆ.
ಖರ್ಗೆ ಅವರೇ ಏನ್ ಮಾತಾಡುತ್ತಿದ್ದಿರಿ ಎಂಬ ಬಗ್ಗೆ ಪ್ರಜ್ಞೆ ಇರಲಿ. ನಿಮಗೆ ತಾಕತ್ ಇದ್ದರೆ RSS ಬ್ಯಾನ್ ಮಾಡಿ ತೋರಿಸಿ. ಜನ್ಮದಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಬರಲ್ಲಾ. ನೀವು ಬ್ಯಾನ್ ಮಾಡಲು ಆಗಲ್ಲಾ. ಕೂಡಲೇ ನಿಮ್ಮ ಹೇಳಿಕೆ ವಾಪಸ್ ಪಡೆಯುಬೇಕು ಎಂದು ಹೇಳಿದರು.