ಬೆಂಗಳೂರು : ರಾಜ್ಯ ಕಾಂಗ್ರೆಸ್‌ನಲ್ಲಿ ಕುರ್ಚಿ ಸಂಘರ್ಷಕ್ಕೆ ಕೊನೆ ಎಂಬುದೇ ಇಲ್ಲದಂತಾಗಿದೆ. ಇಂದು ಮಲ್ಲಿಕಾರ್ಜುನ ಖರ್ಗೆಯವರು ಸಿಎಂ ಪಟ್ಟದ ವರದಿ ಹಿಡಿದು ರಾಹುಲ್ ಜೊತೆ ಮಾತುಕತೆ ಮಾಡಲಿದ್ದಾರೆ.
ಸಂಪುಟ ಪುನಾರಚನೆಯೋ? ನಾಯಕತ್ವ ಬದಲಾವಣೆಯೋ?ಎಂಬುದರ ಬಗ್ಗೆ ಚರ್ಚಿಸಲು ದಿಲ್ಲಿಯತ್ತ ಮುಖ ಮಾಡಿದ್ದಾರೆ. ಈ ಚರ್ಚೆಯ ಬಳಿಕ ಡಿಕೆಶಿ ಮತ್ತು ಸಿದ್ದು ಜೊತೆ ಚರ್ಚೆ ಮಾಡಲಿದ್ದಾರೆ. ರಾಜ್ಯ ರಾಜಕೀಯದ ಚಿತ್ತ ಇದೀಗ ದೆಹಲಿಯತ್ತ ಎಂಬಂತಾಗಿದೆ.
ಇದಲ್ಲದೇ ಖರ್ಗೆ ದೆಹಲಿಗೆ ತೆರಳುವ ವೇಳೆ ಡಿಕೆಶಿ ಖರ್ಗೆ ಮನೆಗೆ ಹೋಗಿದ್ದಾರೆ. ಒಂದೇ ಕಾರಿನಲ್ಲಿ ಮಲ್ಲಿಕಾರ್ಜುನ ಖರ್ಗೆ ಮತ್ತು ಡಿಕೆ ಶಿವಕುಮಾರ್ ಕಂಡುಬಂದಿದ್ದಾರೆ. ಇದೀಗ ಖರ್ಗೆಯವರ ಪ್ರಯಾಣ ಸಾಕಷ್ಟು ಕುತೂಹಲ ಮೂಡಿಸಿದೆ.
ಇದನ್ನೂ ಓದಿ : ‘ಕರಾವಳಿ’ ಚೆಲುವು ಹೆಚ್ಚಿಸಿದ ಸುಷ್ಮಿತಾ ಭಟ್..!



















