ಬೆಂಗಳೂರು: ಕಾಂಗ್ರೆಸ್ ನಲ್ಲಿ(congress) ಆಂತರಿಕ ಕಲಹ ಜೋರಾಗಿದೆ. ಈಗ ರಾಜ್ಯ ಉಸ್ತುವಾರಿ ವಿರುದ್ಧವೂ ಹಲವರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿ ರಾಹುಲ್ ಗಾಂಧಿಗೆ(Rahul Gandhi) ದೂರು ನೀಡಲು ಕೂಡ ಮುಂದಾಗಿದ್ದಾರೆ.
ಹಲವು ಸಚಿವರು ಸುರ್ಜೇವಾಲ(Surjewala) ಅವರಿಂದಾಗಿ ನಮಗೆ ಹಿನ್ನಡೆಯಾಗುತ್ತಿದೆ ಎಂದು ಸಿಎಂ ಬಳಿ ಅವಲೊತ್ತಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ ಉಸ್ತುವಾರಿಯನ್ನು ಮತ್ತೆ ಮರಳಿ ಕರೆಸಿಕೊಳ್ಳುವಂತೆ ಹೈಕಮಾಂಡ್ ಗೆ ಒತ್ತಡ ಹಾಕಬೇಕೆಂದು ಸಿಎಂಗೆ ಮನವಿ ಮಾಡುತ್ತಿದ್ದಾರೆ.
ಹಾಸನದಲ್ಲಿ ನಡೆದಿದ್ದ ಸ್ವಾಭಿಮಾನ ಸಮಾವೇಶದ(Self Esteem Convention) ಹೆಸರು ಬದಲಾವಣೆ ಮಾಡಿದ್ದು, ದಲಿತ ಸಚಿವರ ಔತಣಕೂಟಕ್ಕೆ ಬ್ರೇಕ್ ಹಾಕಿರುವುದು. ಬೆಳಗಾವಿಯಲ್ಲೇ ಡಿಸಿಎಂ ಡಿಕೆ ಶಿವಕುಮಾರ್(DK Sivakumar) ಹಾಗೂ ಡಿಕೆ ಸುರೇಶ್ (DK Suresh) ಜತೆಗೆ ಪ್ರತ್ಯೇಕ ಸಭೆ ನಡೆಸಿದ್ದು ಈಗ ಹಲವರ ಆಕ್ರೋಶಕ್ಕೆ ಕಾರಣವಾಗಿದೆ. ಸುರ್ವೇವಾಲ ಎಲ್ಲರ ಸಮಸ್ಯೆಗನ್ನು ಆಲಿಸಬೇಕಿತ್ತು. ಆದರೆ, ಪಕ್ಷಪಾತಿ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಹಲವರು ಆರೋಪಿಸಿದ್ದಾರೆ.