ಶಿವಮೊಗ್ಗ: ರಾಜ್ಯದ ಕಾಂಗ್ರೆಸ್ ಸರ್ಕಾರ ಕರ್ನಾಟಕವನ್ನು ಮುಸಲ್ಮಾನ್ ರಾಜ್ಯ ಮಾಡಲು ಹೊರಟಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.
ಗಣೇಶೋತ್ಸವ ಸಂಭ್ರಮದಲ್ಲಿ ನಡೆದ ಅಹಿತಕಾರಿ ಘಟನೆಗಳ ಬಗ್ಗೆ ಶಿವಮೊಗ್ಗದಲ್ಲಿ ವರದಿಗಾರರೊಂದಿಗೆ ಮಾತನಾಡಿದ ಈಶ್ವರಪ್ಪ, ಹಿಂದೂಗಳು ಗಣೇಶೋತ್ಸವದ ಮೆರವಣಿಗೆ ಮಾಡಿದರೆ ಮಸೀದಿಯಿಂದ ಕಲ್ಲು ಹೊಡೆಯುತ್ತಾರೆ. ರಾಷ್ಟ್ರಭಕ್ತರ ಮೇಲೂ ಕಲ್ಲು ಹೊಡೆಯುತ್ತಾರೆ, ಪೊಲೀಸರಿಗೂ ಹೊಡೆಯುತ್ತಾರೆ, ಮೆರವಣಿಗೆ ಸಂದರ್ಭದಲ್ಲಿ ಉಗಿಯುತ್ತಾರೆ. ಇದೀಗ ಭದ್ರಾವತಿಯಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗುವ ತನಕ ಇವರು ಹೋಗಿದ್ದಾರೆ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.
ಹಿಂದೂಸ್ತಾನದ ಅನ್ನ ತಿನ್ನುವ ಇವರು ಪಾಕಿಸ್ತಾನಕ್ಕೆ ಜೈಕಾರ ಹಾಕುತ್ತಿದ್ದಾರೆ, ಪಾಕಿಸ್ತಾನದ ಪರ ಜೈಕಾರ ಹಾಕುವವರು ಭಾರತ ಬಿಟ್ಟು ಹೋಗಲಿ. ಭದ್ರಾವತಿಯ ಕಾಂಗ್ರೆಸ್ ಶಾಸಕ ಪಾಕಿಸ್ತಾನದ ಪರ ಘೋಷಣೆ ಕೂಗಿದ್ದೆ ಸುಳ್ಳು ಎಂದು ಹೇಳುತ್ತಾರೆ. ತನಿಖೆ ಆಗುವ ಮೊದಲೇ ಈ ರೀತಿ ಹೇಳುತ್ತಿದ್ದಾರೆ. ಇವರು ಮುಸಲ್ಮಾನರ ಗುಲಾಮರಾಗಿದ್ದಾರೆ ಎಂದು ಕಿಡಿಕಾರಿದ್ದಾರೆ.
ಮದ್ದೂರಿನಲ್ಲಿ ಪೊಲೀಸರಿಂದ ಏಟು ತಿಂದ ಮಹಿಳೆ ತನಗಾದ ಗಾಯವನ್ನು ತೋರಿಸುತ್ತಾಳೆ. ರಾಜ್ಯದಲ್ಲಿ ರಾಷ್ಟ್ರ ದ್ರೋಹಿ ಚಟುವಟಿಕೆಗೆ ಆಶಾ ನೀಡುವುದಿಲ್ಲ ಎಂಬ ದಿಟ್ಟ ನಿಲುವನ್ನು ಸಿಎಂ ಮತ್ತು ಗೃಹ ಮಂತ್ರಿ ತೆಗೆದುಕೊಳ್ಳಲಿ. ಇವರು ಸಹ ಮುಸಲ್ಮಾನರ ಗುಲಾಮರಂತೆ ನಡೆದುಕೊಳ್ಳುವುದು ರಾಜ್ಯದ ಜನ ಕ್ಷಮಿಸುವುದಿಲ್ಲಎಂದು ಹೇಳಿದ್ದಾರೆ.
ಮುಸಲ್ಮಾನರು ಒಗ್ಗಟ್ಟಾಗಿ ಮತ ನೀಡುತ್ತಾರೆ. ಅವರು ರಾಷ್ಟ್ರದ್ರೋಹಿ ಘೋಷಣೆ ಕೂಗಿದರು ಪರವಾಗಿಲ್ಲ ಅವರ ಜೊತೆಗಿರುತ್ತೇವೆ ಎಂದು ನಡೆದುಕೊಳ್ಳುತ್ತಿದ್ದಾರೆ ಇದು ಅವರಿಗೆ ಬೆಂಬಲ ನೀಡಿದಂತಾಗುತ್ತಿದೆ. ಈ ಘಟನೆಗಳನ್ನು ಗಮನಿಸಿದಾಗ ರಾಷ್ಟ್ರಧ್ರೋಹಿಗಳ ಷಡ್ಯಂತ್ರ ಇರುವುದು ಕಂಡುಬರುತ್ತದೆ. ರಾಜ್ಯ ಸರ್ಕಾರ ದೇಶದ್ರೋಹಿಗಳನ್ನು ಎಷ್ಟೇ ಬೆಂಬಲಿಸಿದರೂ ಕೇಂದ್ರದಲ್ಲೂ ಒಂದು ಸರ್ಕಾರ ಇದೆ ಎಂದು ತಿಳಿಸಿದ್ದಾರೆ.
ಆಪರೇಷನ್ ಸಿಂಧೂರದ ವೇಳೆ ಮುಸಲ್ಮಾನರು ಸಹ ದೇಶದ ಪರ ನಿಂತರು, ಹಿಂದುಸ್ತಾನ್ ಜಿಂದಾಬಾದ್ ಎಂದು ಹೇಳಿದರು. ಆದರೆ ಕರ್ನಾಟಕದಲ್ಲಿ ಯಾಕೆ ಆ ರೀತಿ ಆಗುತ್ತಿಲ್ಲ. ಏಕೆಂದರೆ ಈ ಸರ್ಕಾರವೇ ಆ ಸಮಾಜದವರನ್ನು ಬೆಂಬಲಿಸುತ್ತಿದೆ. ಕರ್ನಾಟಕದ ಹಿಂದುಗಳು ಒಂದಾಗುತ್ತೇವೆ. ಯಾವುದೇ ಕಾರಣಕ್ಕೂ ದೇಶದ್ರೋಹಿ ಚಟುವಟಿಕೆಗಳನ್ನು ನಾವು ಸಹಿಸುವುದಿಲ್ಲ, ತಕ್ಷಣವೇ ರಾಜ್ಯ ಸರ್ಕಾರ ಎಚ್ಚೆತ್ತುಕೊಳ್ಳಬೇಕು. ದೇಶದ್ರೋಹಿ ಘೋಷಣೆ ಕೂಗಿದವರನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದ್ದಾರೆ.


















