ಬೆಂಗಳೂರು: ರಾಜ್ಯ ವಿದ್ಯುತ್ ಗುತ್ತಿಗೆದಾರರಿಂದ ನಗರದ ಫ್ರೀಡಂ ಪಾರ್ಕ್ ನಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಯುತ್ತಿದೆ.
ಈ ಪ್ರತಿಭಟನೆಯಲ್ಲಿ ನೂರಾರು ವಿದ್ಯುತ್ ಗುತ್ತಿಗೆದಾರರು ಭಾಗಿಯಾಗಿದ್ದಾರೆ. ಈ ವೇಳೆ ಸರ್ಕಾರದ ವಿರುದ್ಧ ಘೋಷಣೆ ಕೂಗಿದ್ದಾರೆ. ಕಾಂಗ್ರೆಸ್ ಸರ್ಕಾರ ಬಡವರ ಮೀಟರ್ ದರ ಏರಿಕೆ ಮಾಡಿದೆ ಎಂದು ಆರೋಪಿಸಿದ್ದಾರೆ. ಅಲ್ಲದೇ, ಹಲವು ಬೇಡಿಕೆಗಳನ್ನು ಈಡೇರಿಸಬೇಕೆಂದು ಮನವಿ ಮಾಡಿದ್ದಾರೆ.
ಗುತ್ತಿಗೆದಾರರ ಬೇಡಿಕೆಗಳು…
ಸ್ಮಾರ್ಟ್ ಮೀಟರ್ ದರ 5 ಸಾವಿರ ರೂ.ನಿಂದ ಹಳೆಯ ದರ 950 ರೂ. ಗೆ ನಿಗದಿ ಮಾಡಬೇಕು.
ಗುತ್ತಿಗೆದಾರರು ಪರವಾನಗಿ ಪಡೆಯಲು ಎಸ್ಸೆಸ್ಸೆಲ್ಸಿ ವಿದ್ಯಾರ್ಹತೆ ವಿನಾಯಿತಿ ನೀಡಿ
ವಿದ್ಯುತ್ ವಿವರಣಾ ಕೇಂದ್ರಗಳಲ್ಲಿ ರಾತ್ರಿ ಕಾರ್ಯಕ್ಕೆ ಪ್ರಥಮ ದರ್ಜಿಯ ಗುತ್ತಿಗೆದಾರಿಗೆ ಅನುಮತಿ ನೀಡಬೇಕು.
2 ಮೆಗಾ ವ್ಯಾಟ್ ವಿದ್ಯುತ್ ಸಂಪರ್ಕ್ ಪಡೆಯುವುದಕ್ಕೆ ವಿಳಂಬ ತಪ್ಪಿಸಬೇಕು.
ಗ್ರಾಮಾಂತರ ಪ್ರದೇಶಗಳಲ್ಲಿ ಅಕ್ರಮವಾಗಿ ಕೃಷಿ ವಿದ್ಯುತ್ ಸಂಪರ್ಕ ಸಂಕ್ರಮ ಮಾಡಬೇಕು.
ವಿದ್ಯುತ್ ಕಂಪನಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾರ್ಮಿಕರು ಅವಘಡದಲ್ಲಿ ಸಾವನ್ನಪ್ಪಿದರೆ ಪರಿಹಾರ ನೀಡಬೇಕು.
ಮೀಟರ್ ರೇಟ್ ಗಳ ದರ ಹೆಚ್ಚಳ ಮಾಡಿರುವುದನ್ನು ಹಿಂಪಡೆಯಬೇಕು.
ಆರ್ಥಿಕವಾಗಿ ಹಿಂದುಳಿದ ಗುತ್ತಿಗೆದಾರರ ಕ್ಷೇಮಾಭಿವೃದ್ಧಿ ನಿಗಮ ಸ್ಥಾಪನೆ ಮಾಡಬೇಕು.
ಒಂದು ವೇಳೆ ಸರ್ಕಾರ ಈ ಬೇಡಿಕೆಗಳನ್ನು ಈಡೇರಿಸದಿದ್ದರೆ, ಉಗ್ರ ಹೋರಾಟ ನಡೆಸಲಾಗುವುದು ಎಂದು ರಾಜ್ಯ ವಿದ್ಯುತ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ರಮೇಶ್ ಎಚ್ಚರಿಕೆ ನೀಡಿದ್ದಾರೆ.