ಚಾಮರಾಜನಗರ : ಜನಾಶೀರ್ವಾದ ಇರೋವರೆಗೂ ನಾನೇ ಸಿಎಂ. ರಾಜ್ಯದಲ್ಲಿ ಕ್ರಾಂತಿನೂ ಇಲ್ಲ, ಭ್ರಾಂತಿನೂ ಇಲ್ಲ. ಇನ್ನೂ 5 ವರ್ಷ ಆದ ಮೇಲೆ ಎಲೆಕ್ಷನ್ ನಡಿಯುತ್ತದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಚಾಮರಾಜನಗರದಲ್ಲಿ ವರದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ರಾಜ್ಯದಲ್ಲಿ ಅನಾವಶ್ಯಕ ಚರ್ಚೆಗಳು ನಡೀತಿವೆ. ಇನ್ನೂ5 ವರ್ಷ ಬಳಿಕ ಎಲೆಕ್ಷನ್ ನಡೆಯುತ್ತೆ. ಮುಂದಿನ ಚುನಾವಣೆಗೂ ನಾವೇ ಅಧಿಕಾರಕ್ಕೆ ಬರುವುದು ಎಂದು ಮಾತನಾಡಿದ್ದಾರೆ.
ಪುನಾರಚನೆ ಬಗ್ಗೆ ಮಾತನಾಡಿದ ಅವರು ಇನ್ನೂ ಚರ್ಚೆಯಾಗಬೇಕಿದೆ. ಎರಡೂವರೆ ವರ್ಷದ ಬಳಿಕ ಪುನಾರಚನೆ ಅಂದಿದ್ದೆ ಆ ವಿಚಾರಕ್ಕೆ ಇನ್ನೂ ಚರ್ಚೆ ಬಾಕಿಯಿದೆ. ಇದನ್ನೇ ಎಲ್ಲರೂ ಕ್ರಾಂತಿ ಅಂತಾ ತಿಳಿದಿದ್ದರು. ಆದ್ರೆ ಯಾವ ಕ್ರಾಂತಿನೂ ಇಲ್ಲ, ಭ್ರಾಂತಿನೂ ಇಲ್ಲ ಎಂದು ಒತ್ತಿ ಒತ್ತಿ ಹೇಳಿದ್ದಾರೆ.
ಇದನ್ನೂ ಓದಿ : 70 ಲಕ್ಷ ರೈತರು ಪಿಎಂ ಕಿಸಾನ್ ಯೋಜನೆಯಿಂದ ಹೊರಗೆ : ನೀವು ಹೀಗೆ ಚೆಕ್ ಮಾಡಿಕೊಳ್ಳಿ



















